ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಕೊನೆಗೂ ಓಪನ್ ಆಯ್ತು ಉಪನಗರ ವೈಟ್ ಟ್ಯಾಪಿಂಗ್ ರಸ್ತೆ!

ರಿಪೋರ್ಟ್- ರಂಜಿತಾಸುನಿಲ್..

ಬೆಂಗಳೂರು: ಕೆಂಗೇರಿಯ ಉಪನಗರ ರಸ್ತೆಯ ವೈಟ್ ಟ್ಯಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಈ ಕಾಮಗಾರಿ ಆರಂಭವಾದಾಗಿನಿಂದಲೂ ಸಾರ್ವಜನಿಕರು,ಸವಾರರು ಸಾಕಷ್ಟು ತೊಂದರೆ ಆಗುತ್ತಿತ್ತು.ಆದರೆ, ಈಗ ಅದಕ್ಕೆ ತೆರೆ ಬಿದ್ದಿದೆ.

ಕಳೆದ 2 ವರ್ಷದಿಂದ ಈ ರಸ್ತೆಯ ಕಾಮಗಾರಿಯಿಂದ ಸಾರ್ವಜನಿಕರಿಗೆ,ವಾಹನ ಸವಾರರಿಗೆ, ಬಸ್ ನವರಿಗೆ ತುಂಬಾ ತೊಂದರೆಯಾಗ್ತಿತ್ತು.ಈ ರಸ್ತೆಯಿಂದ ಶಿರ್ಕೆ, ಕೊಟ್ಟಿಗೆಪಾಳ್ಯ, ದಾಸರಳ್ಳಿ, ಸುಂಕದಕಟ್ಟೆ ಈ ಭಾಗಗಳಿಗೆ ಸಂಪರ್ಕ ಕಲ್ಪಿಸಿಕೊಡುತ್ತೆ. ಅದ್ರೆ ಎರಡು ವರ್ಷದಿಂದ ಯಾವ್ದೆ ವಾಹನವಾದ್ರು ಗಲ್ಲಿ-ಗಲ್ಲಿಗಳಲ್ಲಿ‌ ನುಗ್ಗಿ ಶಿರ್ಕೆಗೆ ಅಟ್ಯಾಚ್ ಆಗಬೆಕಿತ್ತು.ಇದ್ರಿಂದ ಗಲ್ಲಿಯಲ್ಲಿರುವ ಜನ್ರು ಸಹ ಪ್ರತಿನಿತ್ಯ ನರಕ ಅನುಭವಿಸುತಿದ್ರು.

ಬಿಎಂಟಿಸಿ ಬಸ್‌ಗಳಂತು ಕೆಂಗೇರಿ ರೈಲ್ವೆ ಸ್ಟೇಷನ್ ರಸ್ತೆಯನ್ನ ಬಳಸಿಕೊಂಡು ಅಂಡರ್ ಪಾಸ್ ಒಳಗಡೆಯಿಂದ ಕೆಂಗೇರಿ ತಲುಪಬೇಕಿತ್ತು. ಒಂದೊಂದು ಟೈಂ ಆ ಬಸ್‌ಗಳು ಸಹ ನಿಲ್ಲಿಸುತ್ತಿರಲಿಲ್ಲ. ಅಕ್ಕ-ಪಕ್ಕದ ಶಾಲಾ,ಕಾಲೇಜು ಮಕ್ಕಳಿಗೆ ಬಹಳ ತೊಂದರೆಯಾಗುತಿತ್ತು. ಬಸ್ ಪ್ರಯಾಣಿಕರಂತು ಬಸ್ ಇಳಿದು ಅವರ ಮನೆಗೆ ಆಟೋ ಮಾಡಿಕೊಂಡು ಡಬಲ್ ಚಾರ್ಜ್ ಕೊಟ್ಟು ಹೋಗುವ ಪರಿಸ್ಥಿತಿ ಕ್ರಿಯೇಟ್ ಆಗ್ತಿತ್ತು.

ಆದ್ರಿಗ ಇಷ್ಟೆಲ್ಲ ಸಂಕಷ್ಟಗಳಿಗೆ ಈಗ ತೆರೆ ಎಳೆದಿದೆ ಬಿಬಿಎಂಪಿ.ಬರೋಬ್ಬರಿ ಎರಡು ವರ್ಷದ ನಂತರ ವೈಟ್ ಟ್ಯಾಪಿಂಗ್ ಕಾಮಗಾರಿ ಕಂಪ್ಲೀಟ್ ಆಗಿ ವಾಹನ ಸವಾರರು ನಿಟ್ಟುಸಿರಿ ಬಿಡುವ ಹಾಗಾಗಿದೆ.

Edited By : Nagesh Gaonkar
PublicNext

PublicNext

12/07/2022 07:34 pm

Cinque Terre

33.95 K

Cinque Terre

1

ಸಂಬಂಧಿತ ಸುದ್ದಿ