ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಏರ್ ಪೋರ್ಟ್ ಮಾರ್ಗದಲ್ಲಿ ‌ಮೆಟ್ರೋ‌ ಕಾಮಗಾರಿ ಶರವೇಗ

ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ರೈಲು ಕಾಮಗಾರಿ ಚುರುಕುಗೊಂಡಿದ್ದು, ವೇಗವಾಗಿ ಕೆಲಸ ಪೂರ್ಣಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂದಾಗಿದೆ.

ಚಿಕ್ಕಜಾಲ ಬಳಿ ಮೊದಲ ಪಿಲ್ಲರ್ ನಿರ್ಮಾಣ ಕಾಮಗಾರಿಯನ್ನು ಜೂನ್ 10ರಂದು ಪ್ರಾರಂಭಿಸಲಾಗಿದ್ದು, ಪಿಲ್ಲರ್ ಮೇಲೆ ಅಳವಡಿಸುವ 'ಯು' ಆಕಾರದ ಗರ್ಡರ್ ನಿರ್ಮಾಣ ಕಾಮಗಾರಿಯನ್ನ ಕೈಗೆತ್ತಿಕೊಳ್ಳಲಾಗಿದೆ ಎಂದು ನಮ್ಮ ಮೆಟ್ರೋ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆ.ಆರ್ ಪುರಂ ಹೆಬ್ಬಾಳ ಮಾರ್ಗದ ಮೂಲಕ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 36.44 ಕಿ.ಮೀ ಉದ್ದಕ್ಕೂ ಸಿವಿಲ್ ಕಾಮಗಾರಿಯನ್ನು ಮೂರು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಪ್ಯಾಕೇಜ್‌ಗಳ ಗುತ್ತಿಗೆಯನ್ನು ನಾಗಾರ್ಜುನ ಕನ್ಸ್​ಟ್ರಕ್ಷನ್‌ ಕಂಪನಿ (ಎನ್‌ಸಿಸಿ) ಪಡೆದುಕೊಂಡಿದೆ.

ಈ ಮಾರ್ಗದ ನಿಲ್ದಾಣಗಳಿಗೆ ಅಗತ್ಯವಿರುವ 2.23 ಲಕ್ಷ ಚದರ ಮೀಟರ್ ಜಾಗದ ಪೈಕಿ 2.15 ಲಕ್ಷ ಚದರ ಮೀಟರ್ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆ.ಆರ್.ಪುರದಿಂದ ಹೆಬ್ಬಾಳ ತನಕದ ಮಾರ್ಗದಲ್ಲಿ ಮರಗಳ ಸ್ಥಳಾಂತರವಾಯಿತು ಆಗಬೇಕಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಹೆಬ್ಬಾಳದಿಂದ ವಿಮಾನ ನಿಲ್ದಾಣ ಮೆಟ್ರೋ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಾಮಾನ್ಯವಾಗಿ ದೊಡ್ಡ ರಸ್ತೆ ಅಥವಾ ಸೇತುವೆಗಳ ನಿರ್ಮಾಣದ ವೇಳೆ ಈ ರೀತಿಯ ಉಕ್ಕಿನ ಗರ್ಡರ್​ಗಳನ್ನು ಅಳವಡಿಸಲಾಗುತ್ತದೆ. ಈ ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಟಿಡಿ ಇಂಡಿಯಾ ಕಂಪನಿಯು ಸಿಮೆಂಟೇಷನ್ ಸರ್ವೀಸ್‌ನಿಂದ ದೊಡ್ಡ ಕ್ರೇನ್‌ಗಳನ್ನು ಬಳಸಿ ಈ ಗರ್ಡರ್ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟಿನ್ ಫ್ಯಾಕ್ಟರಿ ಬಳಿ ಉಕ್ಕಿನ ಗರ್ಡರ್ ಅಳವಡಿಕೆ ಕಾಮಗಾರಿಯೂ ಚುರುಕಿನಿಂದ ನಡೆಯುತ್ತಿದ್ದು, ಉಕ್ಕು ಮತ್ತು ಕಬ್ಬಿಣದಿಂದ ತಯಾರಿಸಿದ ಸುಮಾರು 150 ಟನ್ ತೂಕದ ಎರಡು ಗರ್ಡರ್​ಗಳನ್ನು ಅಳವಡಿಸಲಾಗಿದೆ.

Edited By :
PublicNext

PublicNext

14/06/2022 07:34 am

Cinque Terre

13.38 K

Cinque Terre

0

ಸಂಬಂಧಿತ ಸುದ್ದಿ