ಬೆಂಗಳೂರು: ಕೆಲವು ವರ್ಷಗಳ ಹಿಂದೆ ಟಾರ್ ರಸ್ತೆ ನಿರ್ಮಿಸಿದ ಬಳಿಕ ಆ ಹೊಸ ಟಾರ್ ರಸ್ತೆಯಲ್ಲಿ ರೋಡ್ ರೋಲರ್ ಚಲಾಯಿಸುವ ಮೂಲಕ ರಸ್ತೆ ಗುಣಮಟ್ಟವನ್ನು ಪರಿಶೀಲನೆ ಮಾಡ್ತಿದ್ರು. ಆದರೆ, ನಾವು ಇವತ್ತು ತೋರಿಸುವ ಟಾರ್ ರೋಡ್ ಗೆ ರೋಡ್ ರೋಲರ್ ಬೇಕಾಗಿಲ್ಲ! ಬದಲಿಗೆ ಒಂದು ಟೂ ವೀಲರ್ ಇದ್ರೂ ಸಾಕು. ಅಷ್ಟರ ಮಟ್ಟಿಗೆ ನಮ್ಮ ಬಿಬಿಎಂಪಿ ಅಧಿಕಾರಿಗಳು ʼತಲೆ ಕೆಡಿಸಿʼಕೊಂಡು ರಸ್ತೆಯನ್ನು ನಿರ್ಮಿಸಿದ್ದಾರೆ!
ಇನ್ನು, ಮೊನ್ನೆ ಅಷ್ಟೇ ಈ ರಸ್ತೆಗೆ ಬಿಬಿಎಂಪಿ ಅಧಿಕಾರಿಗಳು ಟಾರ್ ಹಾಕಿಸಿದ್ದಾರೆ. ಆದರೆ, ಈ ರಸ್ತೆಯಲ್ಲಿ ವಾಹನ ಸಂಚಾರ ಮಾತ್ರ ಅಸಾಧ್ಯ! ಹೀಗಾಗಿ ಸ್ಥಳೀಯರು ರಸ್ತೆ ದುಸ್ಥಿತಿ ಕಂಡು ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದ್ದಾರೆ. ಈ ರಸ್ತೆ ಕಾಮಗಾರಿ ಬಗ್ಗೆ ನಮ್ಮ ಪ್ರತಿನಿಧಿ ನವೀನ್ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ...
- ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
Kshetra Samachara
21/05/2022 09:08 pm