ಬೆಂಗಳೂರು: ಮೊದಲೇ ಈ ರಸ್ತೆ ಟ್ರಾಫಿಕ್ ಜಾಮ್ ಗೆ ಹೆಸರುವಾಸಿ ಅದೇ ಈ ಸಿಲ್ಕ್ಬೋರ್ಡ್ ರಸ್ತೆ.ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಚಲಿಸುತ್ತವೆ ಮತ್ತು ಬೆಂಗಳೂರು ನಗರಕ್ಕೆ ಪ್ರವೇಶ ಮಾಡಲು ಇದೇ ಒಂದು ರಸ್ತೆಯನ್ನು ಬಳಸಬೇಕಾದ ಅನಿವಾರ್ಯತೆಯೂ ಇದೆ.
ಸದ್ಯ ಈ ರಸ್ತೆ ಸಂಪೂರ್ಣ ಹಾಳಾಗಿ ಗುಂಡಿಗಳಿಂದ ತುಂಬಿ ಹೋಗಿದೆ.
ರಸ್ತೆ ಮೇಲೆ ಬಿದ್ದಿರುವ ಗುಂಡಿಗಳಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಇದರಿಂದ ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗುತ್ತಿದೆ.
ಇನ್ನು ತಮಿಳುನಾಡಿನ ಕಡೆಯಿಂದ ಬರುವ ಜನರಿಗೆ ಬೆಂಗಳೂರಿನ ಗುಂಡಿಗಳ ದರ್ಶನ ಈ ರಸ್ತೆಯಿಂದಲೇ ಶುರುವಾಗುತ್ತಿದೆ. ಕೂಡಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ಜನರಿಗೆ ಸಿಗುತ್ತಿರುವ ಗುಂಡಿಗಳ ಭಾಗ್ಯದಿಂದ ಮುಕ್ತಿ ನೀಡಬೇಕಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
16/05/2022 08:02 pm