ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೇಗೂರಿನ ಜನರಿಗೆ ರಸ್ತೆ ಗುಂಡಿಗಳ ಭಾಗ್ಯ !

ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಯಾವಾಗ ಮುಕ್ತಿ ಸಿಗುತ್ತದೆ ಎನ್ನುವ ಯಕ್ಷಪ್ರಶ್ನೆ ಜನರಲ್ಲಿ ಕಾಡ್ತಾ ಇದೆ.ಮಳೆ ಬಂದು ಹೋದ ನಂತರ ಇನ್ನಷ್ಟು ರಸ್ತೆ ಹದಗೆಟ್ಟು ಹೋಗಿವೆ. ರಸ್ತೆ ಯಾವುದು ? ಗುಂಡಿ ಯಾವುದು ? ಒಂಚೂರು ಜನರಿಗೆ ಗೊತ್ತಾಗೋದೇ ಇಲ್ಲ.

ಬೇಗೂರಿನ ನಿವಾಸಿಗಳಿಗೆ ಮಳೆ ಬಂದರೆ ಒಂದು ರೀತಿ ಸಂಕಷ್ಟ. ಮಳೆ ಬರದಿದ್ದರೆ ಇನ್ನೊಂದು ರೀತಿಯ ಕಷ್ಟ.ಯಾಕಂದರೆ ಮಳೆ ಬಂದರೆ ಸಾಕು ರಸ್ತೆ ಗುಂಡಿಗಳು ಬಾಯಿತೆರೆದು ನಿಂತಿರುತ್ತವೆ. ಈ ರಸ್ತೆಯ ಮೇಲೆ ಜನರು ಸಾಹಸಮಯವಾಗಿ ವಾಹನವನ್ನು ಚಲಿಸಬೇಕು.ಅಂದ್ಹಾಗೆ ಇದು ಬೇಗೂರಿನ ಮಣಿಪಾಲ್ ಕೌಂಟಿ ರಸ್ತೆ. ಇಲ್ಲಿ ಮಳೆ ಬಂದು ನಿಂತರೆ ಸಾಕು. ರಸ್ತೆಗಳಲ್ಲಿ ಗುಂಡಿ ರಾರಾಜಿಸುತ್ತಿರುತ್ತದೆ.

ಇದರಿಂದ ಈ ರಸ್ತೆಯನ್ನು ಉಪಯೋಗಿಸುವ ವಾಹನ ಸವಾರರಿಗೆ ಬಾರಿ ಕಷ್ಟವಾಗುತ್ತಿದೆ.ತೆರಿಗೆ ಕಟ್ಟುವ ಜನರಿಗೆ ಬಿಬಿಎಂಪಿ ಈ ಮೂಲಕ ಗುಂಡಿಗಳ ಭಾಗ್ಯವನ್ನು ನೀಡಿದೆ.ಹಲವಾರು ವಾಹನಗಳು ದಿನನಿತ್ಯ ಈ ರಸ್ತೆಯ ಮೇಲೆ ಚಲಿಸುತ್ತಿದ್ದು ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಗುಂಡಿಗಳನ್ನು ಮುಚ್ಚಿ ಜನರಿಗೆ ಸೂಕ್ತವಾದ ರಸ್ತೆಯನ್ನು ನೀಡಬೇಕು.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Manjunath H D
Kshetra Samachara

Kshetra Samachara

07/05/2022 05:55 pm

Cinque Terre

4.27 K

Cinque Terre

0

ಸಂಬಂಧಿತ ಸುದ್ದಿ