ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸದ್ಯದಲ್ಲೇ ಬೆಂಗಳೂರಿಗೆ ಬರಲಿದೆ ಮೆಟ್ರೋ ನಿಯೋ ರೈಲು

ವರದಿ - ಗಣೇಶ್ ಹೆಗಡೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಸದ್ಯದಲ್ಲೇ ಮೆಟ್ರೋ ನಿಯೋ ರೈಲು ಎಂಟ್ರಿಯಾಗಲಿದೆ.‌ ಈಗಾಗಲೇ ವಿದೇಶಗಳಲ್ಲಿ ಸಂಚಾರ ಮಾಡ್ತಾಯಿರುವ ಈ ನಿಯೋ ರೈಲು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತನ್ನ‌ ಮೊದಲ ಸಂಚಾರವನ್ನು ಆರಂಭಿಸಲಿದೆ.‌ ಮೂರು ಬಸ್ ಜಾಯಿಂಟ್ ಬಸ್‌ಗಳಷ್ಟು ಉದ್ದವಿರುವ ಮೆಟ್ರೋ ನಿಯೋ ರೈಲು ವಿದ್ಯುತ್ ಮೂಲಕ ರಸ್ತೆಯಲ್ಲಿ ಸಂಚಾರ ಮಾಡಲಿದೆ.‌

ನೋಡಲು ಬಸ್ ಥರ ಕಾಣುವ ಈ ರೈಲಿನಿಂದ ಎಂಜಿನ್ ಮೂಲಕ ಎತ್ತರದ ಎಲೆಕ್ಟ್ರಿಕ್ ಲೈನ್‌ಗೆ ಕನೆಕ್ಷನ್ ನೀಡಲಾಗುತ್ತದೆ.‌ ಆ ವಿದ್ಯುತ್ ಆಧಾರದ ಮೇಲೆ ರೈಲು ಸಂಚಾರ ಮಾಡಲಿದೆ.‌ ನಮ್ಮ ಮೆಟ್ರೋ ರೀತಿಯೇ ಇದೊಂದು ಗ್ರೀನ್ ಟೆಕ್ನಾಲಜಿಯಾಗಿದ್ದು, ಮೆಟ್ರೋ ನಿಯೋ ರೈಲಿಗೆ ಡೆಡಿಕೇಟೆಡ್ ಕಾರಿಡಾರ್ ಮೀಸಲಿರಿಸಲಾಗುತ್ತದೆ. ಮೆಟ್ರೋ ನಿಯೋ ರೈಲು ಸಂಚಾರಕ್ಕೆ ಕಾರಿಡಾರ್ ನಿರ್ಮಾಣ ಮಾಡಲು ಒಂದು ಕಿಲೋ‌ಮೀಟರ್‌ಗೆ 120 ಕೋಟಿ ರೂ. ವೆಚ್ಚ ತಗುಲಲಿದ್ದು, ಏಕಕಾಲದಲ್ಲಿ 250 ಪ್ರಯಾಣಿಕರನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ ಅಂತ ನಿಗಮದ ಎಂಡಿ ಅಂಜು ಫರ್ವೇಜ್ ಮಾಹಿತಿ ನೀಡಿದರು.

ನಗರದಲ್ಲಿ ಹೆಚ್ಚು ಟ್ರಾಫಿಕ್ ಹಾಗೂ ಐಟಿ ಉದ್ಯೋಗಿಗಳು ಇರುವ ಏರಿಯಾಗಳಲ್ಲಿ ಮೆಟ್ರೋ ನಿಯೋ ರೈಲು ಆರಂಭ ಮಾಡ್ತಾಯಿದ್ದು, ಎಲೆಕ್ಟ್ರಾನಿಕ್ ಸಿಟಿ ಸುತ್ತ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೈಲು ಓಡಾಡಲಿದ್ದು ಪ್ರತಿ 500 ಮೀಟರ್‌ಗೆ ಒಂದು ಸ್ಟೇಷನ್ ಬರಲಿದೆ.‌ ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಫ್ ಅಥಾರಿಟಿಯಿಂದ ಮೆಟ್ರೋ ನಿಯೋ ರೈಲು ವ್ಯವಸ್ಥೆ ಪರಿಚಯಿಸಲಾಗ್ತಾಯಿದ್ದು ಇದು ಮೆಟ್ರೋ ಫೀಡರ್ ಆಗಿಯೂ ಕೂಡ ಕಾರ್ಯ ನಿರ್ವಹಿಸಲಿದೆ.‌

ಮೆಟ್ರೋ ನಿಯೋ ರೈಲಿಗೆ ಈಗಾಗಲೇ ಡಿಪಿಆರ್ ಸಿದ್ಧ ಮಾಡಲಾಗುತ್ತಿದೆ.‌ ಅಂದುಕೊಂಡಂತೆ ಎಲ್ಲಾ ಆದ್ರೆ ಸದ್ಯದಲ್ಲೇ ಮೆಟ್ರೋ ನಿಯೋ ರೈಲು ಬೆಂಗಳೂರಲ್ಲಿ ಸಂಚಾರ ಮಾಡಲಿದೆ.

Edited By : Shivu K
PublicNext

PublicNext

05/05/2022 08:01 am

Cinque Terre

36.83 K

Cinque Terre

0

ಸಂಬಂಧಿತ ಸುದ್ದಿ