ಬೆಂಗಳೂರು: ಹೌದು, ನಿನ್ನೆ ತಾನೇ ʼಪಬ್ಲಿಕ್ ನೆಕ್ಸ್ಟ್ʼ ಗ್ರೌಂಡ್ ರಿಪೋರ್ಟ್ ನಲ್ಲಿ ಕೆಂಗೇರಿ ಮೋರಿಯಿಂದ ಏನೆಲ್ಲ ಸಮಸ್ಯೆಗಳು ಉದ್ಭವಿಸಿವೆ ಅಂತ ನೋಡಿದ್ವಿ. ಹಾಗೇ ಕೆಂಗೇರಿ ವೃಷಭಾವತಿ (ಕೆಂಗೇರಿ ಮೋರಿ ) ಹರಿದು ಚೆನ್ನಪಟ್ಟಣ ಸಮೀಪದಲ್ಲಿ ಅರ್ಕಾವತಿಗೆ ಸೇರಿಕೊಳ್ಳುತ್ತೆ. ಈ ಕಲುಷಿತ ನೀರಿನಿಂದಲೇ ರೈತರು ಬೆಳೆ ಬೆಳೆಯುತ್ತಿದ್ದಾರೆ!
ಈ ನೀರಿನಿಂದ ರೈತ ಬೆಳೆ ಬೆಳೆದ್ರೆ, ಮೊದಲಿಗೆ ಕಾಲುನವೆ (ಕೆರತ ) ಆಗೋದು, ಗುಳ್ಳೆ ಏಳುವುದು, ಚರ್ಮದ ವ್ಯಾಧಿ ಕಾಡುತ್ತದೆ. ನಂತರ ಈ ನೀರಿನಿಂದ ಬೆಳೆದ ಬೆಳೆಯಲ್ಲಿ ಯಾವುದೇ ಸತ್ವಾಂಶ ಇರುವುದಿಲ್ಲ. ಈ ನೀರಿನಲ್ಲಿ ಆಸ್ಪತ್ರೆಗಳ ವೇಸ್ಟೇಜ್ ನೀರು, ಕಾರ್ಖಾನೆಗಳ ತ್ಯಾಜ್ಯ, ಮಲಮೂತ್ರಗಳ( ಚೇಂಬರ್ ) ನೀರು ಎಲ್ಲವೂ ಸೇರಿರುವುದರಿಂದ ಮನುಷ್ಯನ ದೇಹದ ಮೇಲೆ ಬಹಳ ದುಷ್ಪರಿಣಾಮ ಬೀರುತ್ತೆ. ಇನ್ನು, ಈ ಬಗ್ಗೆ ನಮಗಿಂತ ಸಮಗ್ರ ವಿವರಣೆ ನೀಡಲು ವೈದ್ಯರ ಸಲಹೆ ಬಲು ಮುಖ್ಯವಾಗುತ್ತೆ. ಹಾಗಾದ್ರೆ, ಅವರನ್ನೇ ಕೇಳೋಣ ಬನ್ನಿ...
ರೈತ ದೇಶದ ಬೆನ್ನೆಲುಬು ಅಂತಾರೆ. ಆದ್ರೆ, ಅವನಿಗೆ ಸಮಸ್ಯೆ ಆದ್ರೆ ಯಾರೂ ಬರಲ್ಲ. ಬೆಳೆ ಬೆಳೆಯೋದು ಈತನ ಧ್ಯೇಯ. ಈ ಕೆಂಗೇರಿ ಮೋರಿಯಿಂದಾಗಿ ರೈತರಿಗೆ ಸಮಸ್ಯೆಯಾಗ್ತಿರೋದ್ರಲ್ಲಿ ಎರಡು ಮಾತಿಲ್ಲ. ಗದ್ದೆಗೆ ನೀರು ಕಟ್ಟುತ್ತಾರೆ. ಆದ್ರೆ, ಆ ನೀರಿನಿಂದ ನವೆ ಸಹಿತ ಚರ್ಮ ರೋಗವೆಲ್ಲ ಬರ್ತಿದೆ. ಈ ಮೋರಿನಲ್ಲೇ ನೀರು ಕಟ್ಟುತ್ತಿದ್ದಾರೆ ಅನ್ನೋ ವಾಸ್ತವತೆ ಈ ರೈತರಿಗೆ ಗೊತ್ತಿಲ್ಲ!
ಇನ್ನು, ಕೆಂಗೇರಿ ಮೋರಿ ನೀರು ಬೆಂಗಳೂರಿಗರಿಗೆ ಏನೇನು ಸಮಸ್ಯೆ ತಂದಿದೆ ಅಂತ ನೋಡಿದ್ರಿ. ಈ ನೀರು ಹರಿದು ಮುಂದೆ ಆರ್ಕಾವತಿ ಸೇರಿ ಅಲ್ಲಿ ರೈತರು, ಸಾರ್ವಜನಿಕರು ಏನು ಸಮಸ್ಯೆ ಅನುಭವಿಸುತ್ತಿದ್ದಾರೆ ಅಂತ ನೋಡಿದ್ರಿ. ಆದ್ರೆ, ಈ ವೃಷಭಾವತಿ ನದಿ ಮುಂದೆ
ಸಂಗಮಕ್ಕೆ ಸೇರಿಕೊಳ್ಳುತ್ತೆ. ಪ್ರವಾಸಿಗರು ಅಲ್ಲೇ ಸ್ನಾನ ಮಾಡ್ತಾರೆ. ಅಲ್ಲಿ ಏನೆಲ್ಲ ಸಮಸ್ಯೆಯಾಗ್ತಿದೆ ಅಂತ ಮುಂದೆ ಸ್ಪೆಷಲ್ ಸ್ಟೋರಿಯಲ್ಲಿ ತೋರಿಸ್ತೀವಿ.
-ರಂಜಿತಾ ಸುನಿಲ್ ʼಪಬ್ಲಿಕ್ ನೆಕ್ಸ್ಟ್ʼ ಚೆನ್ನಪಟ್ಟಣ
Kshetra Samachara
03/05/2022 07:17 pm