ಬೆಂಗಳೂರು: ನಮ್ಮ ಆರ್-6 ಮಾರ್ಗದ ಕಾಮಗಾರಿ ಭೂ ಸ್ವಾಧೀನ ಪ್ರಕ್ರಿಯೆ ವಿರುದ್ಧ ಹೋರಾಟ ಕೊನೆಗೊಳಿಸಿರುವ ಹೊಸೂರು ರಸ್ತೆಯ ರಿಚ್ಮಂಡ್ ಟೌನ್ ಸಮೀಪದ ಆಲ್ ಸೆಂಟ್ಸ್ ಚರ್ಚ್ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ತನ್ನ ಅಲ್ಪ ಜಮೀನು ನೀಡಲು ಒಪ್ಪಿಗೆ ಸೂಚಿಸಿದೆ.
ಚರ್ಚ್ ನ ಎಬಿನೇಜರ್ ಪ್ರೇಮ್ ಕುಮಾರ್ ಈ ವಿಷಯ ತಿಳಿಸಿದರು. ನಿರಂತರ ಹೋರಾಟ, ಮನವಿ, ಚರ್ಚೆ ನಂತರ ಒಪ್ಪಂದಕ್ಕೆ ಬರಲಾಗಿದ್ದು, ಚರ್ಚ್ ನ 218 ಚದರ್ ಮೀಟರ್ ಜಾಗವನ್ನು ಬಿಎಂಆರ್ ಸಿಎಲ್ ಗೆ ನೀಡಲು ಒಪ್ಪಿದ್ದೇವೆ. ಆದರೆ ಚರ್ಚ್ ಆವರಣದಲ್ಲಿನ ಪವಿತ್ರ ತೋಪಿನಲ್ಲಿರುವ ಮರಗಳಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸುವಂತೆ ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ಪ್ರೇಮ್ ಕುಮಾರ್ ತಿಳಿಸಿದ್ದಾರೆ.
ಬನ್ನೇರುಘಟ್ಟ ದಿಂದ ನಾಗಾವರದ ವರೆಗಿನ ಮೆಟ್ರೋ ಭೂಗತ ನಿಲ್ದಾಣ ನಿರ್ಮಿಸಲು ಸಮಗ್ರ ಯೋಜನಾ ವರದಿ ತಯಾರಿಸಲಾಗಿತ್ತು. ಅದರ ಪ್ರಕಾರ ಬಿಎಂಆರ್ ಸಿಎಲ್ ಒಟ್ಟು 4582 ಚದರ್ ಮೀಟರ್ ಭೂ ಸ್ವಾಧೀನ ಕ್ಕೆ ಮುಂದಾಗಿತ್ತು. ಇದನ್ನು ವಿರೋಧಿಸಿ ಕಳೆದ 4 ವರ್ಷದಿಂದ ಚರ್ಚ್ ಸದಸ್ಯರು ಹೋರಾಟ ನಡೆಸಿದ್ದರು. ಇದಕ್ಕೆ ಸ್ಪಂದಿಸಿರುವ ಬಿಎಂಆರ್ ಸಿಎಲ್ 4582 ಚ.ಮೀ ಬದಲಾಗಿ ಚರ್ಚ್ 218 ಚ.ಮೀ ಪಡೆಯಲು ನಿರ್ಧರಿಸಿದೆ.
========
Kshetra Samachara
03/05/2022 02:35 pm