ಬೆಂಗಳೂರು: ಮಲ್ಲೇಶ್ವರಂ ಸಂಪಿಗೆ ಚಿತ್ರಮಂದಿರದಿಂದ 18 ಕ್ರಾಸ್‌ವರೆಗೆ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ರಸ್ತೆಯುದ್ದಕ್ಕೂ ನಡೆಯುತ್ತಿದ್ದ ವ್ಯಾಪಾರಿಗಳ ಮೇಲೆ ಪರಿಣಾಮ ಬೀರಿದೆ. ಗ್ರಾಹಕರ ಕೊರತೆಯಿಂದ ಇಲ್ಲಿನ ವಾಣಿಜ್ಯ ಮಳಿಗೆ ಹಾಗೂ ಬೀದಿ ವ್ಯಾಪಾರ ಮಂಕಾಗಿದೆ.
ಸಂಪಿಗೆ ರಸ್ತೆಯಲ್ಲಿ ವಾಣಿಜ್ಯ ಚಟುವಟಿಕೆ ಹಾಗೂ ವ್ಯಾಪಾರಕ್ಕೆ ಹೆಸರುವಾಸಿ. ಪ್ರಮುಖ ಆಭರಣ ಮಳಿಗೆ, ವಸ್ತ್ರಗಳ ಮಳಿಗೆ, ತಿಂಡಿ-ತಿನಿಸುಗಳ ವ್ಯಾಪಾರಕ್ಕೆ ನೆಚ್ಚಿನ ತಾಣ. ಆದರೆ ಕಳೆದೊಂದುವರೆ ತಿಂಗಳಿಂದ ವ್ಯಾಪಾರ ಡಲ್ ಆಗಿದೆ. ರಸ್ತೆ ಬದಿಯಲ್ಲಿ ಮೋರಿ ನೀರು ಹರಿಯುತ್ತಿದ್ದು ವಾಸನೆ ಬರುತ್ತಿದೆ. ಇನ್ನು ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಂಡಿಲ್ಲ.
Kshetra Samachara
20/04/2022 08:17 am