ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ವೈಟ್ ಟಾಪಿಂಗ್ ಕಾಮಗಾರಿ: ಏಪ್ರಿಲ್ 15ರಿಂದ ಗೂಡ್ಶೆಡ್ ರಸ್ತೆ ಬಂದ್....

ಬೆಂಗಳೂರು : ಬೇಲಿಮಠದ ರಸ್ತೆ ಮಾರ್ಗವಾಗಿ ಶಾಂತಲಾ ಜಂಕ್ಷನ್ವರೆಗೆ ಜಂಕ್ಷನ್ವರೆಗೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ ಗೂಡ್ಶೆಡ್ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಲಿದೆ.

ಮೈಸೂರು ರಸ್ತೆಯಿಂದ ಮೆಜಸ್ಟಿಕ್ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಒಂದು ತಿಂಗಳ ಕಾಲ ಮುಚ್ಚಲಾಗುತ್ತದೆ.

ವೈಟ್ ಟಾಪಿಂಗ್ ಯೋಜನೆಯಡಿ ಗೂಡ್ ಶೆಡ್ ರಸ್ತೆಯನ್ನು 11.88 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಬಿಜಿಎಸ್ ಪ್ರೈಓವರ್, ಅಂಬೇಡ್ಕರ್ ಡೌನ್ ಲ್ಯಾಂಪ್ನಿಂದ ಡಾ.ಟಿಸಿಎಂ ರಾಯನ್ ರಸ್ತೆ ಮಾರ್ಗವಾಗಿ ಶಾಂತಲಾ ಜಂಕ್ಷನ್ ವರೆಗೆ ಎರಡು ಹಂತಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ.

ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ:

ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಕಾಮಗಾರಿ ಆರಂಭಿಸಿದೆ. ಮೂರು ತಿಂಗಳೊಳಗೆ ಕಾಮಗಾರಿ ಮುಗಿಸುವುದಾಗಿ ಬಿಬಿಎಂಪಿ ಹೇಳಿತ್ತು .

ಆದರೆ, ಏಳು ತಿಂಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಈಗ ಎರಡನೆ ಹಂತದ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಮುಗಿಸುವ ಗುರಿ ಹೊಂದಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಕಾಮಗಾರಿ ಪೂರ್ಣಗಳಿಸುವ ಅನುಮಾನ ವ್ಯಕ್ತವಾಗಿದೆ

Edited By : Shivu K
PublicNext

PublicNext

09/04/2022 12:57 pm

Cinque Terre

30.35 K

Cinque Terre

0

ಸಂಬಂಧಿತ ಸುದ್ದಿ