ಬೆಂಗಳೂರು: ಈಜಿಪುರ ಮೇಲ್ಸೇತುವೆಯನ್ನು ಡಿಸೆಂಬರ್ 31ರೊಳಗೆ ಪೂರ್ಣಗೊಳಿಸಲು ಹೈಕೋರ್ಟ್ ಗುತ್ತಿಗೆದಾರರಿಗೆ ಸಮಯ ನೀಡಿದೆ. ಈ ಯೋಜನೆಯನ್ನು ಹಿಂದಿನ ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ ಯೋಜನೆಯಡಿ ಪ್ರಾರಂಭಿಸಲಾಗಿತ್ತು.
ಈಜಿಪುರ ಜಂಕ್ಷನ್ ಮತ್ತು ಕೋರಮಂಗಲದ ಕೇಂದ್ರೀಯ ಸದರ್ನ್ ನಡುವಿನ ಈಜಿಪುರ ಮೇಲ್ಸೇತುವೆಯನ್ನು ಡಿ. 31, 2022 ರೊಳಗೆ ಪೂರ್ಣಗೊಳಿಸಲು ಅಫಿಡವಿಟ್ ಸಲ್ಲಿಸಲು ಹೈಕೋರ್ಟ್ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ಸ್ ಲಿ. ಗೆ ಮಂಗಳವಾರ ಅನುಮತಿ ನೀಡಿದೆ.
2.5 ಕಿಮೀ ಫ್ಲೈಓವರ್ ಯೋಜನೆ ಪೂರ್ಣಗೊಳಿಸಲು ವಿಳಂಬ ಮಾಡಿದ ಕಂಪನಿ ವಿರುದ್ಧ ಒಪ್ಪಂದ ರದ್ದುಪಡಿಸಲು ಮತ್ತು ಎಫ್‌ಐಆರ್ ದಾಖಲಿಸಲು ಈ ಹಿಂದೆ ಕೋರ್ಟ್ ಅಧಿಕಾರಿಗಳಿಗೆ ಆದೇಶಿಸಿತ್ತು.
ಬೋರೇಗೌಡ
ಹೊಸೂರು ರಸ್ತೆಯೊಂದಿಗೆ ಇನ್ನರ್ ರಿಂಗ್ ರೋಡ್‌ಗೆ ಸಂಪರ್ಕ ಕಲ್ಪಿಸುವ ಈ ಮೇಲ್ಸೇತುವೆ, ಜನನಿಬಿಡ ಈಜಿಪುರ ಜಂಕ್ಷನ್ ಮತ್ತು ಕೋರಮಂಗಲ ಸೋನಿ ಸಿಗ್ನಲ್ ಜಂಕ್ಷನನ್ನು ಬೈಪಾಸ್ ಮಾಡುವ ಗುರಿ ಹೊಂದಿದೆ. ಮೇಲ್ಸೇತುವೆ ಯೋಜನೆ ಶೀಘ್ರ ಆಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮುನ್ಸಿಫ್ ಅಹ್ಮದ್
- ನವೀನ್, ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
31/03/2022 10:39 pm