ವರದಿ - ಗಣೇಶ್ ಹೆಗಡೆ
ಬೆಂಗಳೂರು: ಬಿಎಂಟಿಸಿ ಕಳೆದ ಕೆಲ ದಿನಗಳಿಂದ ಎಲೆಕ್ಟ್ರಿಕ್ ಬಸ್ ಗಳನ್ನ ರೋಡಿಗಿಳಿಸುತ್ತಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಗಳನ್ನ ರಸ್ತೆಗಿಳಿಸಲು ಚಿಂತನೆ ನಡೆಸುತ್ತಿದೆ.
ಇಇಎಸ್ಎಲ್ಎನರ್ಜಿ ಎಫಿಶಿಯನ್ಸಿ ಸರ್ವಿಸ್ ಲಿಮಿಟೆಡ್ ಕಂಪನಿಯಿಂದ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಗಳನ್ನ ಪಡೆಯಲು ಪ್ರಸ್ತಾವನೆ ನೀಡಿದೆ. ಕೆಂದ್ರ ಸರ್ಕಾರದ ಅಧೀನ ಕಂಪನಿ ಇಇಎಸ್ಎಲ್, ದೇಶದ ಎಲ್ಲಾ ಸಾರಿಗೆ ನಿಗಮಗಳಿಗೂ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ನೀಡಲು ಚಿಂತನೆ ನಡೆಸಿದ್ದು, ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಗಳನ್ನ ಇಡೀ ದೇಶದಲ್ಲಿ ಅವಶ್ಯಕತೆ ಇರುವ ಸಾರಿಗೆ ನಿಗಮಗಳಿಗೆ ಪುನಃ ಪರಿಚಯ ಮಾಡಲು ಮುಂದಾಗಿದೆ.
ಹೀಗಾಗಿ ಬಿಎಂಟಿಸಿ ನಿಗಮಕ್ಕೂ ಡಬಲ್ ಡೆಕ್ಕರ್ ಬಸ್ ಗಳ ಪೂರೈಕೆ ಬಗ್ಗೆ ಕೇಳಿದ್ದು, ಕಂಪನಿಯ ಆಹ್ವಾನಕ್ಕೆ
ಮೊದಲ ಹಂತದಲ್ಲಿ ಪ್ರಯೋಗಿಕವಾಗಿ 5 ಡಬಲ್ ಡೆಕ್ಕರ್ ಬಸ್ ಗಳನ್ನ ನೀಡುವಂತೆ ಬಿಎಂಟಿಸಿ ಹೇಳಿದ್ದು, ಬೆಂಗಳೂರಲ್ಲಿ ಫ್ಲೈಓವರ್, ಸ್ಕೈವಾಕ್, ಕೇಬಲ್, ಮರಗಳು ಹೆಚ್ಚಾಗಿರೋದ್ರಿಂದ ಸಿಟಿ ಸ್ಟಕ್ಚರ್ , ಜನರ ಅಭಿಪ್ರಾಯ ಪಡೆಯಲು ಪ್ರಾಯೋಗಿಕ ಸಂಚಾರ ನಡೆಸಲಾಗುವುದು ಎಂದಿದೆ.
ಈ ಸಂಬಂಧ ಆರಂಭಿಕ ಹಂತದಲ್ಲಿ ಚರ್ಚೆಗಳು ಆಗ್ತಾಯಿದ್ದು ಪ್ರಾಯೋಗಿಕ ಸಂಚಾರದ ನಂತರ ಮುಂದಿನ ದಿನಗಳಲ್ಲಿ ಬಿಎಂಟಿಸಿ ನಿರ್ಧಾರ ಕೈಗೊಳ್ಳಲಿದೆ.
ಬಿಎಂಟಿಸಿಯ ಈ ನಿರ್ಧಾರಕ್ಕೆ ಸಾರಿಗೆ ನೌಕರರು ಅಸಮಧಾನ ವ್ಯಕ್ತ ಪಡಿಸುತ್ತಾರೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ ನಿಗಮ ಎಲೆಕ್ಟ್ರಿಕ್ ಬಸ್ ಗಳ ಖರೀದಿ ಮಾಡಿ ಮತ್ತಷ್ಟು ನಷ್ಟ ಅನುಭವಿಸುತ್ತಿದೆ. ಈ ಮಧ್ಯೆ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಗಳ ಅವಶ್ಯಕತೆ ನಿಗಮಕ್ಕೆ ಇಲ್ಲ ಎಂದಿದ್ದಾರೆ.
PublicNext
11/02/2022 02:59 pm