ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ : ಹೆದ್ದಾರಿ ಅಗಲೀಕರಣದಿಂದ 800 ವರ್ಷ ಪುರಾತನ ಮಠ ತೆರವು ...

ದೊಡ್ಡಬಳ್ಳಾಪುರ : ಹೆದ್ದಾರಿ ಅಗಲೀಕರಣದಿಂದಾಗಿ 800 ವರ್ಷಗಳ ಐತಿಹಾಸಿಕ ಹಿನ್ನೆಲೆವುಳ್ಳ ಖಾನಿಮಠ ಕಣ್ಮರೇಯಾಗುವ ಹಂತಕ್ಕೆ ಬಂದಿದೆ.

ಸದ್ಯ ಈ ಮಠದಲ್ಲಿ ಜೀವಂತ ಸಮಾಧಿಯಾದ ಮೂರು ಗದ್ದುಗೆಗಳಿವೆ, ಸಂಪ್ರದಾಯದ ಪ್ರಕಾರ ಗದ್ದುಗೆಗಳನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವಂತಿಲ್ಲ ಗದ್ದುಗೆಗಳ ಉಳುವಿಗಾಗಿ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಭಕ್ತರ ಮನವಿ ಮಾಡಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣೇನಹಳ್ಳಿಯ ಖಾನಿಮಠಕ್ಕೆ 800 ವರ್ಷಗಳ ಇತಿಹಾಸವಿದೆ, ತಾಲೂಕಿನ ಲಿಂಗಾಯತ ಸಮುದಾಯದ ಏಕೈಕ ಮಠ ಇದಾಗಿದೆ. ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಅಶ್ರಯ ನೀಡಿರುವ ಮಠ ಅನ್ನದಾನ ಮತ್ತು ವಿದ್ಯಾದಾನ ಮಾಡಿದೆ.

ಖಾನಿಮಠದ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 207 ಹಾದು ಹೋಗಿದ್ದು, ಹೆದ್ದಾರಿಯ ಅಗಲೀಕರಣದಿಂದ ಪುರಾತನ ಮಠಕ್ಕೆ ಚ್ಯುತಿ ಬಂದಿದೆ.

ಅಗಲೀಕರಣದಿಂದ ಮಠ ರಕ್ಷಣೆಗೆ ಧ್ವನಿ ಎತ್ತಿರುವ ಭಕ್ತರು ಮಠದ ಮುಂಭಾಗ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ ಜೊತೆಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ಸಹ ಪರಿಶೀಲನೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.

ನಾರಹಳ್ಳಿಯಿಂದ ಚಿಕ್ಕಬೆಳವಂಗಲದ ಎರಡು ಕಿ.ಮೀ ಅಂತರದಲ್ಲಿ ಗ್ರಾಮಗಳಿಗೆ ಸಂಪರ್ಕಿಸುವ 16 ರಸ್ತೆಗಳು ಬರುತ್ತವೆ, ಈ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿದ್ದಾರೆ ಗ್ರಾಮಸ್ಥರಿಗೂ ಅನುಕೂಲವಾಗಲಿದೆ ಮತ್ತು ಪುರಾತನ ಮಠವು ಸಹ ಉಳಿಯಲಿದೆ.

ಒಂದು ವೇಳೆ ರಸ್ತೆ ಅಗಲೀಕರಣವಾದಲ್ಲಿ 16 ರಸ್ತೆಗಳ ವಾಹನ ಸವಾರರ ಓಡಾಟಕ್ಕೂ ತೊಂದರೆ ಅಪಘಾತಗಳಿಗೂ ಕಾರಣವಾಗಲಿದೆ ಹೈಕೋರ್ಟ್ ಸೂಚನೆ ನೀಡಿದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಈ ಬಗ್ಗೆ ಗಮನ ಹರಿಸದೆ ಹೆದ್ದಾರಿ ಅಗಲೀಕರಣಕ್ಕೆ ಮುಂದಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Edited By :
PublicNext

PublicNext

03/02/2022 04:15 pm

Cinque Terre

34.33 K

Cinque Terre

0

ಸಂಬಂಧಿತ ಸುದ್ದಿ