ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬಿಎಂಟಿಸಿಯಲ್ಲಿ ಕೆಲಸ ಮಾಡ್ತಿರಾ ನಿಮ್ಗೆ ನಾವು ಹೆಣ್ಣು ಕೊಡಲ್ಲ...!

ಬೆಂಗಳೂರು : ರೈತರಿಗೆ ಹೆಣ್ಣು ಕೊಡಲು ನಕಾರ ತೋರುವ ಕೆಲವು ಪ್ರಕರಣಗಳನ್ನು ನಾವು ನೀವೆಲ್ಲಾ ನೋಡಿದ್ದೇವೆ. ಸದ್ಯ ಬಿಎಂಟಿಸಿಯಲ್ಲಿ ಕಲಸ ಮಾಡುವವರಿಗೂ ಇದೇ ಕಷ್ಟ ಶುರುವಾಗಿದೆಯಂತೆ.

ಹೌದು ಬಿಎಂಟಿಸಿಗೆ ಒಂದು ಕಾಲವಿತ್ತು ಬಿಎಂಟಿಸಿ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದಾರೆ ಎಂದ್ರೆ ಸರ್ಕಾರಿ ಕೆಲಸ ಇದ್ದ ಹಾಗೆ. ಸರಿಯಾಗಿ ಸಂಬಳ ಖಾಯಂ ಕೆಲಸ ಎಂಬೆಲ್ಲ ಮಾತುಗಳು ಕೇಳಿ ಬರುತ್ತಿದ್ದವು. ವಿಪರ್ಯಾಸವೆಂದರೆ ಇದೀಗ ಸಂಸ್ಥೆ ನಷ್ಟದಲ್ಲಿ ಇರುವುದರಿಂದ ನೌಕರರ ಕೆಲಸವೂ ಗ್ಯಾರಂಟಿ ಇಲ್ಲ. ಅತ್ತ ಸಂಬಳವೂ ನೆಟ್ಟಗೆ ಬರಲ್ಲ. ಇದನ್ನೆಲ್ಲ ಮನಗಂಡ ಹೆಣ್ಣು ಹೆತ್ತವರು ಬಿಎಂಟಿಸಿ ಸಿಬ್ಬಂದಿಗೆ ಹೆಣ್ಣು ಕೊಡಲು ನಿರಾಕರಿಸುತ್ತಿದ್ದಾರೆ.

ಪ್ರಕರಣವೊಂದರಲ್ಲಿ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮದುವೆ ನಿಗದಿಯಾಗಿತ್ತು. ಆದರೆ ಇತ್ತೀಚಿಗೆ ಸರಿಯಾಗಿ ಸಂಬಳ ಬರದೆ ಇರೋದನ್ನು ಅರಿತ ಹೆಣ್ಣಿನ ಕಡೆಯವರು ನಿಕ್ಕಿ ಆದ ಸಂಬಂಧ ಬೇಡವೆಂದು ಹೇಳಿದ್ದಾರಂತೆ. ಹೆಸರು ಹೇಳಲು ಇಚ್ಚೀಸದ ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಂಡಿದ್ದು, ಬಿಎಂಟಿಸಿ ನೌಕರ ಎಂಬ ಕಾರಣಕ್ಕೆ ಮದುವೆ ಕ್ಯಾನ್ಸಲ್ ಆಗಿದೆ ಎಂದಿದ್ದಾರೆ.

ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ಬಂದಿದ್ದು, ಯಾರೂ ಆ ರೀತಿಯಲ್ಲಿ ಭಾವಿಸಬಾರದು ಎಂದು ಕೋರಿಕೊಂಡಿದ್ದಾರೆ

Edited By : Nagesh Gaonkar
PublicNext

PublicNext

28/01/2022 10:25 am

Cinque Terre

40.75 K

Cinque Terre

0

ಸಂಬಂಧಿತ ಸುದ್ದಿ