ಬೆಂಗಳೂರು : ಆಡುಗೋಡಿಯ ಸಿಎಆರ್ ಪೊಲೀಸ್ ವಸತಿಗೃಹ ಆವರಣದಲ್ಲಿ ಜೈವಿಕ ಅನಿಲ ಸ್ಥಾವರವನ್ನು ಮೆ.ಗೇಲ್ ಗ್ಯಾಸ್ ಲಿ. ಹಾಗೂ ಹಸಿರುದಳ ಸಂಸ್ಥೆಗಳ ಸಹಯೋಗದೊಂದಿಗೆ ಸ್ಥಾಪಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಹೌದು ದೇಶದಲ್ಲೆ ಇದು ಅಂತ್ಯಂತ ವಿನೂತನ ಕಾರ್ಯಕ್ರಮವಾಗಿದ್ದು, ಜೈವಿಕ ಅನಿಲ ಸ್ಥಾವರದವನ್ನು ನಿರ್ಮಿಸುವ ಸಂಬಂಧ ಪೊಲೀಸ್ ಆಯುಕ್ತ ಕಮಲ್ ಪಂತ್, ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಸಮ್ಮುಖದಲ್ಲಿ ಯೋಜನೆಯ ಕರಾರು ಪತ್ರಕ್ಕೆ ಸಹಿ ಮಾಡಲಾಗಿದೆ.
ಈ ಯೋಜನೆಯನ್ನು ಏಪ್ರಿಲ್ ಒಳಗಾಗಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ. ಸಿಎಆರ್ (ದಕ್ಷಿಣ) ಆಡುಗೋಡಿ ಪೊಲೀಸ್ ವಸತಿಗೃಹ ಸಮುಚ್ಚಯದಲ್ಲಿ 1,600 ಪೊಲೀಸ್ ಸಿಬ್ಬಂದಿಗಳ ವಸತಿ ಗೃಹಗಳಿದ್ದು, 7 ಸಾವಿರ ಸಿಬ್ಬಂದಿ ಹಾಗೂ ಕುಟುಂಬ ವರ್ಗದವರು ವಾಸಿಸುತ್ತಿದ್ದಾರೆ. ಇವರ ಉಪಯೋಗಕ್ಕಾಗಿ ಮೆ.ಗೇಲ್ ಗ್ಯಾಸ್ ಲಿ. ಹಾಗೂ ಹಸಿರುದಳ ಸಂಸ್ಥೆಗಳ ಸಹಯೋಗದೊಂದಿಗೆ ಪೊಲೀಸ್ ವಸತಿಗೃಹ ಆವರಣದಲ್ಲಿ ಜೈವಿಕ ಅನಿಲ ಸ್ಥಾವರವನ್ನು ಸ್ಥಾಪಿಸಲಾಗುತ್ತಿದೆ.
ಈ ಜೈವಿಕ ಅನಿಲ ಸ್ಥಾವರದಿಂದ ಉತ್ಪಾದಿಸಲಾಗುವ ಜೈವಿಕ ಅನಿಲವನ್ನು ಸಿಎಆರ್ ದಕ್ಷಿಣ ಘಟಕದಲ್ಲಿರುವ ಡಾಗ್ ಕೆನಾಲ್ನಲ್ಲಿರುವ ಶ್ವಾನಗಳ ಆಹಾರ ತಯಾರಿಕೆಗೆ ಪಯೋಗಿಸಿಕೊಳ್ಳಲಾವುದು. ಜತೆಗೆ ಹೆಚ್ಚುವರಿಯಾಗಿ ಜೈವಿಕ ಅನಿಲ ಉತ್ಪಾದನೆಯಾದಲ್ಲಿ ಸಿಎಆರ್ ದಕ್ಷಿಣ ಘಟಕದಲ್ಲಿರುವ ಕಲ್ಯಾಣ ಮಂಟಪಕ್ಕೂ ಬಳಸಿಕೊಳ್ಳಲಾಗುತ್ತದೆ.
ಮನೆ ಮನೆಗಳಿಂದ ಪಡೆದ ಕಸವನ್ನು ವಿಂಗಡಿಸಿ ಪುನರ್ ಉತ್ಪಾದನೆಗೆ ಕಳುಹಿಸಿಕೊಡಲಾಗುತ್ತದೆ. ಈ ಯೋಜನೆಗೆ ಅಗತ್ಯವಿರುವ ಬಂಡವಾಳವನ್ನು ಬೆಂಗಳೂರಿನ ಮೆ.ಗೇಲ್ ಗ್ಯಾಸ್ ಲಿ. ಭರಿಸಲಿದ್ದು, 39.20 ಲಕ್ಷ ರೂ.ನ್ನು ಕಾರ್ಪೊರೇಟರ್ ಸೋಶಿಯಲ್ ರೆಸ್ಪಾನ್ಸಿಬಲಿಟಿ ಅನುದಾನದಲ್ಲಿ ಆರ್ಥಿಕ ನೆರವು ನೀಡುತ್ತಿದೆ.
ಒಟ್ಟಿನಲ್ಲಿ ಕಸದಿಂದ ರಸ ಮಾಡಲು ಹೊರಟಿರುವ ನಗರ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
Kshetra Samachara
10/01/2022 09:11 pm