ಬೆಂಗಳೂರು: ಟ್ರಿಪ್ ಟಿಕೆಟ್‌ಗಳನ್ನು ನೀಡುವ ಯೋಜನೆ ಜಾರಿಗೆ ತರಲು ಬೆಂಗಳೂರು ಮೆಟ್ರೋ ಮುಂದಾಗಿದೆ. ಹಾಗೂ ಸಾರ್ವಜನಿಕ ಟಿಕೆಟ್ ಕೌಂಟರ್‌ಗಳಲ್ಲಿ ಜನದಟ್ಟಣೆಯನ್ನು ತಗ್ಗಿಸಲು ಹಾಗೂ ವಿಭಿನ್ನ ಟಿಕೆಟಿಂಗ್ ಜಾರಿಗೊಳಿಸುವ ನಿಟ್ಟಿನಲ್ಲಿ ಈ ಹೊಸ ಯೋಜನೆಯನ್ನು ಪರಿಚಯಿಸುವುದು 'ನಮ್ಮ ಮೆಟ್ರೋ' ಉದ್ದೇಶವಾಗಿದೆ.
ಮಾ. 2022 ರಿಂದ ಟ್ರಿಪ್ ಟಿಕೆಟ್ ಗಳು ಜಾರಿಗೆ ಬರಲಿದೆ. ಮೆಟ್ರೋ ಕಾರ್ಡ್ ಗಳ ಮಾದರಿಯಲ್ಲೇ ಇರಲಿರುವ ಟ್ರಿಪ್ ಟಿಕೆಟ್ ಗಳು 25, 50, 100 ಹೀಗೆ ನಿರ್ದಿಷ್ಟ ಟ್ರಿಪ್ ಗಳನ್ನು ಹೊಂದಿರುತ್ತವೆ. ಇದಕ್ಕಾಗಿ ಮುಂಗಡ ಪಾವತಿ ಮಾಡಬೇಕಾಗುವುದು. ಇದಕ್ಕೆ ಟ್ರಿಪ್ ದೂರದ ಮಿತಿ ಇಲ್ಲ. ಅದು ಎರಡು ಸ್ಟೇಷನ್ ಗಳ ಅಂತರ ಇರಬಹುದು ಅಥವಾ ದೂರದ ಅಂತರ ಇರಬಹುದು ಎರಡಕ್ಕೂ ಟ್ರಿಪ್ ಟಿಕೆಟ್ ಗಳು ಅನ್ವಯವಾಗಲಿದೆ.
Kshetra Samachara
23/12/2021 11:25 am