ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮ ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ - ಕೆಲ ಸಮಯ ಸಂಚಾರ ಸ್ಥಗಿತ

ವರದಿ - ಗಣೇಶ್ ಹೆಗಡೆ

ಬೆಂಗಳೂರು:ಹಸಿರು ಮಾರ್ಗದ ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದ ನಡುವೆ ಮಧ್ಯಾಹ್ನ 1.10 ಗಂಟೆಗೆ ತಾಂತ್ರಿಕ ದೋಷದಿಂದಾಗಿ ಸುಮಾರು 25 ನಿಮಿಷಗಳ ಅವಧಿಗೆ ಮೆಟ್ರೋ ಸೇವೆಯಲ್ಲಿ ಅಡಚಣೆ ಉಂಟಾಯಿತು.

ಈ ಅವಧಿಯಲ್ಲಿ ಮೆಟ್ರೋ ಸೇವೆಯೂ ಯಶವಂತಪುರ ಮೆಟ್ರೋ ನಿಲ್ದಾಣದಿಂದ ರೇಷ್ಮೆ ಸಂಸ್ಥೆ ವರೆಗೆ ಮೆಟ್ರೋ ಸಂಚಾರ ನಡೆಸಲಾಯಿತು.

ತಾಂತ್ರಿಕ ದೋಷವು ಸರಿಪಡಿಸಿದ ನಂತರ ಮಧ್ಯಾಹ್ನ 1.35 ಗಂಟೆಯಿಂದ ಎಂದಿನಂತೆ ಮೆಟ್ರೋ ಸೇವೆಯೂ ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ರೇಷ್ಮೆ ಸಂಸ್ಥೆ ವರೆಗೆ ಆರಂಭಗೊಂಡಿದೆ.

ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ವಿಷಾದಿಸುತ್ತೆವೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

Edited By :
Kshetra Samachara

Kshetra Samachara

29/11/2021 03:30 pm

Cinque Terre

624

Cinque Terre

0

ಸಂಬಂಧಿತ ಸುದ್ದಿ