ಜ್ಞಾನ ಒಂದಿದ್ದರೆ ಮರುಭೂಮಿಯಲ್ಲಿ ಕೂಡ ನೀರನ್ನು ತೆಗೆಯಬಹುದು ಅನ್ನೋದಕ್ಕೆ ಇದೊಂದು ನಿದರ್ಶನ. ಅದು ನಿಜ ಕೂಡ ,ಅದರಲ್ಲೂ 2 ಸಾವಿರ 3 ಸಾವಿರ ನಷ್ಟು ಆಳ ಬೋರ್ವೆಲ್ ಕೊರೆಸಿದ್ರು ಸಹ ನೀರ್ ಸಿಕ್ತಿಲ್ಲ. ಅಂತದ್ರಲ್ಲಿ ಗಾಳಿಯಿಂದ ಶುದ್ಧ ನೀರಿನ ಘಟಕವನ್ನು ಸ್ಥಾಪನೆ ಮಾಡುವುದರ ಮೂಲಕ ಜನರ ನೀರಿನ ಬವಣೆಯನ್ನು ಈಗ ನೀಗಿಸಲಾಗಿದೆ. ಅಷ್ಟಕ್ಕೂ ಅದು ಎಲ್ಲಿ ಅಂತೀರಾ.ಈ ಸ್ಟೋರಿ ನೋಡಿ.
ಹೌದು. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಾರಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಲಿಂಗಾಪುರ ಗ್ರಾಮದಲ್ಲಿ, ಗಾಳಿಯಿಂದ ಶುದ್ಧ ನೀರಿನ ಘಟಕವೊಂದನ್ನ ಸ್ಥಾಪಿಸಲಾಗಿದೆ. ಖಾಸಗಿ ಒಡೆತನದ ಸ್ಟ್ರಡ್ರ್ಸ್ ಫೌಂಡೇಶನ್ ವತಿಯಿಂದ ಗಾಳಿಯಿಂದ ಕುಡಿಯುವ ಶುದ್ಧ ನೀರಿನ ಘಟಕವನ್ನು ರಾಜ್ಯದ ಎರಡನೇ ಜಾಗದಲ್ಲಿ ಸ್ಥಾಪನೆ ಮಾಡಲಾಗಿದೆ.
ಗಾಳಿಯಿಂದ ನೀರು ಪರಿವರ್ತನೆಯಾಗುವ ವಿಧಾನ!
ಗಾಳಿಯ ಶುದ್ಧ ನೀರಿನ ಘಟಕದ ಜಾಗದಲ್ಲಿ ಎಲ್ಲಾ ಕಡೆಯಿಂದಲೂ ಕೂಡ ಗಾಳಿ ಸರಾಗವಾಗಿ ಒಳಗೆ ಬರುತ್ತೆ.ನಂತರ ಗಾಳಿಯಿಂದ ಸಂಗ್ರಹವಾಗೋ ತೇವಾಂಶವನ್ನ ಸಂಗ್ರಹ ಮಾಡಿ ಕ್ಯಾನ್ ಗೆ ಕಳಿಸುತ್ತದೆ. ಮಿನರಲ್ ವಾಟರ್ ಪೌಡರನ್ನುಅದಕ್ಕೆ ಬೆರೆಸಿ ಬಳಿಕ ನೀರನ್ನು ಮೇಘದೂತ ಎಂಬ ಮಷಿನ್ ಮೂಲಕ ನೀರನ್ನು ಫಿಲ್ಟರ್ ಮಾಡಿ ಹೊರ ಕಳಿಸುತ್ತಿದೆ.
ಇನ್ನು ಇಲ್ಲಿನ ಲಿಂಗಾಪುರ ಗ್ರಾಮದಲ್ಲಿ ನೀರಿನ ಸಮಸ್ಯೆ ಸಾಕಷ್ಟು ಹೆಚ್ಚಾಗಿತ್ತು. ನೀರಿಗಾಗಿ ಕಿಲೋಮೀಟರುಗಟ್ಟಲೆ ದೂರ ಹೋಗುವ ಪರಿಸ್ಥಿತಿ ಎದುರಾಗಿತ್ತು.ಇದನ್ನು ಮನಗಂಡ ಸ್ಡ್ರಡ್ಸ್ ಫೌಂಡೇಶನ್ ಗಾಳಿಯಿಂದ ಶುದ್ಧ ಕುಡಿಯುವ ನೀರು ಘಟಕವನ್ನು ಮಾಡಿ ಊರಿಗೆ ನೆರವಾಗಿದ್ದಾರೆ. ಅಲ್ಲದೆ ಐದು ರೂಪಾಯಿ ಕೊಟ್ಟರೆ ಸಾಕು 20 ಲೀಟರ್ ಶುದ್ಧ ನೀರನ್ನ ಜನ ಇಲ್ಲಿ ಪಡೆಯಬಹುದು.
ಒಟ್ನಲ್ಲಿ ಬೋರ್ವೆಲ್ ಮೂಲಕ ಸಿಕ್ಕುತಿದ್ದ ನೀರು ಈಗ ಗಾಳಿ ಮೂಲಕ ಸಿಕ್ಕಿರುವುದು ನಿಜಕ್ಕೂ ವಿಶೇಷ. ಈ ಘಟಕ ಯಶಸ್ಸು ಕಂಡರೆ, ಎಲ್ಲಾ ಜಾಗಗಳಲ್ಲೂ ಇಂತಹ ಪ್ಲಾಂಟ್‌ಗಳನ್ನು ಸ್ಡ್ರಡ್ಸ್ ಫೌಂಡೇಶನ್ ಮಾಡಲು ಮುಂದಾಗಿದೆ. ಜನರು ಇದನ್ನ ಯಾವ ರೀತಿ ಸದುಪಯೋಗಪಡಿಸಿಕೊಳ್ಳುತ್ತಾರೋ ಅನ್ನೋದನ್ನ ಕಾದುನೋಡಬೇಕಿದೆ
ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
30/07/2022 05:35 pm