ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಯಕಲ್ಪ ನಿರೀಕ್ಷೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ದೇವನಹಳ್ಳಿ ಶಿಲ್ಪ ಕಲಾ ಶಾಲೆ

ಶಿಲ್ಪಕಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನ ಭಾರತ ವಿಶ್ವಕ್ಕೆ ಕೊಟ್ಟ ಮಹಾನ್ ಕೊಡುಗೆ. ಹಾಗೆಯೇ ರಾಜ್ಯದ ದೇವನಹಳ್ಳಿಯ ಶಿಲ್ಪಕಲಾ ಶಾಲೆ ಗುರುಕು‌ಲ ಪದ್ಧತಿಯಲ್ಲಿ ಶಿಲ್ಪಕಲೆನ ಶಾಸ್ತ್ರೋಕ್ತವಾಗಿ ಕಲಿಸುತ್ತಿದೆ. ಈ ಮೂಲಕ‌ ಶಿಲ್ಪಕಲಾ ಸಂಸ್ಕೃತಿಯನ್ನ ಉಳಿಸಿ, ಬೆಳೆಸಿ ಅಭಿವೃದ್ಧಿ ಪಡಿಸುತ್ತಿದೆ. ಎ.ಸಿ. ಹೆಚ್. ಆಚಾರ್ಯರ ಶಿಲ್ಪಕಲಾ ಸೇವೆಗೆ ಈ ಸಂಸ್ಥೆ ರಾಷ್ಟ್ರಪ್ರಶಸ್ತಿ ಪಡೆದಿರುವುದು ದೇವನಹಳ್ಳಿಯ ಹೆಗ್ಗಳಿಕೆ.

ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಹಲವು ಶ್ರೇಷ್ಠತೆಗಳ ನೆಲೆ. ಕೆಂಪೇಗೌಡರ ವಂಶಸ್ಥರಾದ ಮಲ್ಲಭೈರೇಗೌಡ ಹಾಗೂ ದೇವೇಗೌಡರು ದೇವನಹಳ್ಳಿಯ ಪ್ರಸಿದ್ಧ ಶಿಲ್ಪಿಗಳಾದ ಗೋಪಾಲಾಚಾರ್ಯ ಮತ್ತು ರಾಮಾಚಾರ್ಲು ರವರಿಂದ ಆಮೆಯಾಕಾರದ ಪ್ರಸಿದ್ಧ ಕೋಟೆಯನ್ನು ಕಟ್ಟಿಸಿದ್ದಾರೆ. ಇಂತಹ‌ ಇತಿಹಾಸ ಹಿನ್ನಲೆಯ ಎ.ಸಿ.ಹೆಚ್. ಆಚಾರ್ಯರು 1952ರಲ್ಲಿ ದೇವನಹಳ್ಳಿಲಿ ಶಿಲ್ಪಕಲಾ ಶಾಲೆಯನ್ನು‌ ಗುರುಕುಲ ಪದ್ಧತಿಯಲ್ಲಿ ಪ್ರಾರಂಭಿಸಿದರು. ಇಲ್ಲಿ ಶಿಲ್ಪಕಲೆ ಕಲಿತ ಸಾವಿರಾರು ಜನ ದೇಶಾದ್ಯಂತ ಶಿಲ್ಪಕಲೆಯನ್ನ ಕಲಿಸಿ, ಬೆಳೆಸುತ್ತಿದ್ದಾರೆ.

ACH ಆಚಾರ್ಯರು ಸಕಲ ವಿದ್ಯಾ ಪಾರಂಗತರಾಗಿ ಪ್ರಾಚೀನ ಶಿಲ್ಪ, ಕಲೆ, ಶಾಸ್ತ್ರ, ಆಗಮಗಳಲ್ಲಿ ಪರಿಣತರಾಗಿದ್ದರು. ಇಂತಹ ಜ್ಞಾನಿಗಳು ಹತ್ತುವರ್ಷದ ಶಿಲ್ಪಕಲೆಯನ್ನು 2 ವರ್ಷದ ಕೋರ್ಸನ್ನಾಗಿಸಿ ಆಧುನಿಕ ಶಿಕ್ಷಣದ ಜೊತೆ ವಿದ್ಯೆ ನೀಡುತ್ತಿದ್ದರು‌. ಇವರ ಶಿಲ್ಪ ಕಲಾ ಸೇವೆಗೆ, ಅದ್ಭುತ ಕಲಾಪ್ರತಿಭೆ ಗುರ್ತಿಸಿ ಕೇಂದ್ರ ಸರ್ಕಾರ 1989ರಲ್ಲಿ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ಶಿಲ್ಪಕಲಾಶಾಲೆಗೆ ಆಗಿನ ಪ್ರಧಾನಿ ಜವಹರಲಾಲ್ ನೆಹರೂ, ಇಂಗ್ಲೆಂಡ್ ನ ಎಲಿಜಬೆತ್ ರಾಣಿ, ದಲೈಲಾಮಾ, ಸರ್.ಎಂ.ವಿಶ್ವೇಶ್ವರಯ್ಯ, ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತಿತರ ಗಣ್ಯರು ಭೇಟಿ ನೀಡಿ ಸಂಸ್ಥೆಯ ಕೀರ್ತಿಪತಾಕೆಯನ್ನು ವಿಶ್ವಮಟ್ಟಕ್ಕೆ ಏರಿಸಿದ್ದರು.

ಶಿಲ್ಪಕಲಾ ಶಾಲೆಗೆ ಆಸಕ್ತಿ ಇದ್ದವರು ಮಾತ್ರ ಬಂದು ಗುರುಕುಲ‌ ಪದ್ಧತಿಲಿ ಶಿಕ್ಷಣ ಕಲಿಯುತ್ತಾರೆ. ಅಮೆರಿಕ, ಯೂರೋಪ್ ದೇಶಗಳಿಂದ ಡೀನ್‌ ಗಳು, ಇಂಜಿನಿಯರ್‌ ಗಳು ಭೇಟಿ ನೀಡಿ, ಅಧ್ಯಯನ ನಡೆಸಿ ಹೋಗ್ತಾರೆ. ಇಂತಹ ರಾಷ್ಟ್ರ ಪ್ರಶಸ್ತಿ ಪಡೆದ ಶಿಲ್ಪಕಲಾ ಶಾಲೆಗೆ PM ರಿಂದ CM ವರೆಗೂ ಸಾಮಾನ್ಯನಿಂದ ಇಂಗ್ಲೆಂಡ್ ರಾಣಿವರೆಗೂ ಭೇಟಿ ನೀಡಿದ್ದಾರೆ. ಆದರೆ, ವಿಶ್ವವಿದ್ಯಾಲಯ ಮಟ್ಟಕ್ಕೆ ಬೆಳೆಯಬೇಕಾದ ಸಂಸ್ಥೆಗೆ ಬೇಕಿದೆ ಅಭಿವೃದ್ಧಿಯ ಕಾಯಕಲ್ಪ.

Edited By :
PublicNext

PublicNext

28/07/2022 08:59 pm

Cinque Terre

49.8 K

Cinque Terre

3

ಸಂಬಂಧಿತ ಸುದ್ದಿ