ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೆಲಮಂಗಲದಲ್ಲಿ ಮನೆ- ತೋಟ ಜಲಾವೃತ; ಶಾಸಕರ ನಿರ್ಲಕ್ಷ್ಯಕ್ಕೆ ಜನ ಆಕ್ರೋಶ

ನೆಲಮಂಗಲ: ಕಳೆದೆರಡು ದಿನಗಳಿಂದ ನೆಲಮಂಗಲದಲ್ಲಿ ವರುಣನ ಆರ್ಭಟದಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಮಣ್ಣೆ ಗ್ರಾಮದ ತಗ್ಗು ಪ್ತದೇಶದ ಮನೆಗಳಿಗೆ, ತೋಟಗಳಿಗೆ ಮಳೆನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಗ್ರಾಮದ ಚಿಕ್ಕಣ್ಣಯ್ಯ ಎಂಬವರ ಮನೆಗೆ ಮಳೆನೀರು ನುಗ್ಗಿದ್ದು, ಸಾಮಗ್ರಿಗಳೆಲ್ಲ ನೀರುಪಾಲಾಗಿದೆ. ಮಣ್ಣೆ ಗ್ರಾಮದಿಂದ ದಾಸೇನಹಳ್ಳಿ ಗ್ರಾಮದ ವರೆಗಿನ ರಸ್ತೆ ಜಲಾವೃತಗೊಂಡಿದೆ. 20 ಎಕರೆ ಕೃಷಿ ಭೂಮಿಗೆ ಮಳೆನೀರು ನುಗ್ಗಿ ಒಂದು ಎಕರೆಯಷ್ಟು ರಾಗಿ, ಭತ್ತದ ಬೆಳೆ ನಾಶವಾಗಿದೆ. ಅಡಿಕೆ, ತೆಂಗಿನ‌ ತೋಟವೂ ಜಲಮಯವಾಗಿದೆ.

ಈ ಬಗ್ಗೆ ಶಾಸಕರಿಗೆ, ಅಧಿಕಾರಿಗಳಿಗೆ ಮಾಹಿತಿ‌ ನೀಡಿದರೂ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿಲ್ಲ. ಇದರಿಂದ ರೈತರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಸುಮಿತ್ರ, ಪಬ್ಲಿಕ್ ನೆಕ್ಸ್ಟ್ ನೆಲಮಂಗಲ

Edited By : Nagesh Gaonkar
PublicNext

PublicNext

06/09/2022 10:21 pm

Cinque Terre

44.97 K

Cinque Terre

0

ಸಂಬಂಧಿತ ಸುದ್ದಿ