ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಣಮಳೆಯಿಂದ ಕುಸಿದು ಬಿದ್ದ ಗೋಡೆ; ಮನೆ ಮಾಲೀಕ ಉಸಿರುಗಟ್ಟಿ ದುರ್ಮರಣ!

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಸಮೀಪದ ಸೊಣ್ಣೆಹಳ್ಳಿಪುರದಲ್ಲಿ ಭಾರಿ ಮಳೆಗೆ ಮನೆ ಕುಸಿದು ಬಸವರಾಜ್ (68) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬಸವರಾಜ್ ಅವರು ಇಂದು ಮಧ್ಯಾಹ್ನ 1ರ ಸುಮಾರಿಗೆ ಮಳೆಯಿಂದ ಬೀಳುತ್ತಿದ್ದ ಮನೆ ಗೋಡೆ ಬಳಿಯೇ ಕುಳಿತಿದ್ದರು. ಮಳೆಯಿಂದ ಮನೆ ಒಂದು ಭಾಗ ಕುಸಿದಿತ್ತು. ಮನೆಯ ಸ್ಥಿತಿ ಹೀಗಾಯ್ತಲ್ಲ ಎಂದು ಕೊರಗುತ್ತಾ, ಮನೆ ಮುಂದೆ ಕುಳಿತುಕೊಂಡಿದ್ದ ವೇಳೆ ಒಂದು ಭಾಗದ ಗೋಡೆ ಇವರ ಮೇಲೆಯೇ ಕುಸಿದು ಬಿದ್ದಿದೆ!

ಈ ವೇಳೆ ಈ ಹಿರಿಯ ಜೀವ ಗೋಡೆಯ ಮಣ್ಣಿನಿಂದ ಹೊರ ಬರಲಾರದೆ ಮಣ್ಣಿನಡಿ ಸಿಲುಕಿ ಉಸಿರುಗಟ್ಟಿ ಮೃತ ಪಟ್ಟಿದ್ದಾರೆ! ದುರಂತ ಸ್ಥಳಕ್ಕೆ ಇಂದು ಸಂಜೆ ಹೊಸಕೋಟೆ ತಹಶೀಲ್ದಾರ್ ಮಹೇಶ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುರ್ಘಟನೆ ಕುರಿತು ನಮ್ಮ ಪ್ರತಿನಿಧಿ ಸುರೇಶ್ ಬಾಬು ಅವರಿಂದ ಸಮಗ್ರ ಮಾಹಿತಿ...

Edited By :
PublicNext

PublicNext

29/08/2022 10:12 pm

Cinque Terre

56.24 K

Cinque Terre

0

ಸಂಬಂಧಿತ ಸುದ್ದಿ