ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಭಾರಿ ಮಳೆಗೆ ತುಂಬಿಹೋದ ಬೊಮ್ಮನಹಳ್ಳಿ ಲೇಔಟ್ ಗಳು

ಬೆಂಗಳೂರು: ಮಳೆರಾಯ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ ಸದ್ಯ ಭಾರೀ ಮಳೆಗೆ ಬೊಮ್ಮನ ಹಳ್ಳಿಯ ಜನ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಬೊಮ್ಮನಹಳ್ಳಿಯ ಡ್ಯೂ ಎಂಕ್ಲೇವ್ ಲೇಔಟ್ ನಿವಾಸಿ ಗಳ ಕಷ್ಟ ಹೇಳಲಾಗದಂತಾಗಿದೆ.

ಈ ಲೇಔಟಿನ ಜನ ಮನೆಯಿಂದ ಹೊರಬರಲು ಪರದಾಟ ನಡೆಸುವ ಸ್ಥಿತಿ ನಿರ್ಮಾಣಗೊಂಡಿದೆ. ಲೇಔಟ್ ನ ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ಜನರು ತಮ್ಮ ಮನೆಗಳಿಂದ ಹೊರ ಬರಲಾಗದೆ ಪರಿತಪಿಸುವಂತಾಗಿದೆ.

ಸದ್ಯ ಸ್ಥಳದಲ್ಲಿ ಅಗ್ನಿಶಾಮಕದಳ ಸಿಬ್ಬಂದಿಯಿಂದ ನೀರನ್ನು ಹೊರ ಹಾಕುವ ಕಾರ್ಯ ನಡೆಯುತ್ತಿದೆ. ಪ್ರತಿ ಬಾರಿ ಮಳೆ ಆದರೆ ಸಾಕು ಸಂಪೂರ್ಣ ಲೇಔಟ್ ಜಲದಿಗ್ಬಂಧನಕ್ಕೆ ಒಳಗಾಗುತ್ತದೆ. ಎಷ್ಟೇ ಬಾರಿ ಅಧಿಕಾರಿಗಳು ಜನಪ್ರತಿನಿಧಿಗಳು ಬಂದು ಹೋದರು ಪರಿಸ್ಥಿತಿ ಮಾತ್ರ ಸರಿಹೋಗಿಲ್ಲ. ಸ್ಥಳದಿಂದ ನಮ್ಮ ಪ್ರತಿನಿಧಿ ನೀಡಿರುವ ವರದಿ ಇಲ್ಲಿದೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Manjunath H D
PublicNext

PublicNext

26/08/2022 10:51 pm

Cinque Terre

52.35 K

Cinque Terre

1

ಸಂಬಂಧಿತ ಸುದ್ದಿ