ಬೆಂಗಳೂರು: ಬೆಳಗ್ಗಿನಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಬೊಮ್ಮನಹಳ್ಳಿಯ ಅನುಗ್ರಹ ಲೇಔಟ್ ನಲ್ಲಿ ರಾಜಕಾಲುವೆ ಉಕ್ಕಿ ಹರಿದ ಕಾರಣ ಸಂಪೂರ್ಣ ಲೇಔಟ್ ಜಲ ದಿಗ್ಬಂಧನಕ್ಕೆ ಒಳಗಾಗಿದೆ!
ಅನುಗ್ರಹ ಲೇಔಟ್ ನ ಬಹುತೇಕ ರಸ್ತೆಗಳು ನೀರಿನಿಂದ ತುಂಬಿ ಹೋಗಿದ್ದು, ಜನರು ಮನೆಯಿಂದ ಹೊರಬರಲು ಕೂಡ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ನೀರು ಕಟ್ಟಿ ಹಾಕಿದೆ.
ಲೇಔಟ್ ನಲ್ಲಿ 2ರಿಂದ 3 ಅಡಿಗಳಷ್ಟು ನೀರು ತುಂಬಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಮೋಟರ್ ಬಳಸಿ ನೀರು ಹೊರ ಹಾಕುವ ಕಾರ್ಯನಿರತರಾಗಿದ್ದಾರೆ.
PublicNext
26/08/2022 09:39 pm