ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರೈನ್ ಬೋ ಡ್ರೈವ್ ಲೇಔಟ್ ಪರಿಸರವೀಗ ಸರೋವರ; ನಿವಾಸಿಗಳ ಗೋಳಿಗೆ ಸ್ಪಂದಿಸದ ಆಡಳಿತ

ಬೆಂಗಳೂರು: ವರುಣನ ಆರ್ಭಟಕ್ಕೆ ರಾಜ್ಯದ ಒಟ್ಟು ಜನತೆಯ ಗೋಳು ಒಂದು ಕಡೆಯಾದರೆ ರಾಜಧಾನಿಯ ಜನರ ಪಾಡು ಇನ್ನೊಂದು ರೀತಿ. ಮಳೆ ತಂದ ಅವಾಂತರ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನು ಪ್ರಶ್ನಿಸುವಂತಿದೆ. ಅಷ್ಟಕ್ಕೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆಗಿರೋ ಸಮಸ್ಯೆ ಏನು ಗೊತ್ತಾ? ಇಲ್ಲಿದೆ ವಿಸ್ತೃತ ವರದಿ...

ಒಂದು ಕಡೆ ಟ್ರ್ಯಾಕ್ಟರ್ ನಲ್ಲಿ ಬರ್ತಿರೋ ಜನರನ್ನ ನೋಡಿ... ರಸ್ತೆ ಬ್ಲಾಕ್ ಮಾಡಿ ನಿಂತಿರೋ ಪ್ರತಿಭಟನಾಕಾರರನ್ನು ನೋಡಿ... ರಸ್ತೆಯಾ? ಸರೋವರವಾ? ಅಂತ ಅನುಮಾನ ಹುಟ್ಟಿಸ್ತಿರೋ ರೈನ್ ಬೋ ಡ್ರೈವ್ ಲೇ ಔಟ್ ಎಂಟ್ರೆನ್ಸ್ ನೋಡಿ... ಮಹಾದೇವಪುರದ ಸರ್ಜಾಪುರ ರಸ್ತೆಯ ರೈನ್ ಬೋ ಡ್ರೈವ್ ಲೇ ಔಟ್. ಇದು ರಾಜಧಾನಿಯಲ್ಲಿ ಮಳೆ ಅಬ್ಬರಕ್ಕೆ ಉದಾಹರಣೆಯೂ ಹೌದು. ಶಾಸಕರು, ಅಧಿಕಾರಿಗಳ ಬೇಜವಾಬ್ದಾರಿತನದ ಕೈ ಗನ್ನಡಿಯೂ ಹೌದು!

ಇದು ನಿನ್ನೆಯಲ್ಲ, ಮೊನ್ನೆ ಸುರಿದ ಮಳೆಗೆ ರೈನ್ ಬೋ ಡ್ರೈವ್ ನಿವಾಸಿಗಳು ಪಡ್ತಾಯಿರೋ ಪಾಡು. ಮನೆಯಿಂದ ಹೊರಬರಲು ಆಗದೇ ತಾವೇ ಟ್ರ್ಯಾಕ್ಟರ್ ಮಾಡಿ, ಜನ ಬರ್ತಾಯಿದ್ದಾರೆ. ಅಷ್ಟೇ ಅಲ್ಲ, ರಸ್ತೆಯಲ್ಲಿ ನಿರ್ಮಾಣ ಆಗಿರೋ ಮಿನಿ ಹೊಳೆಯನ್ನು ಕೂಡ ಫೈರ್ ಇಂಜಿನ್ ಕರೆಸಿ ಹೊರ ಹಾಕುವ ಪ್ರಯತ್ನ ಮಾಡ್ತಿದ್ದಾರೆ.

ನಿನ್ನೆ ರಾತ್ರಿ ಲೇಔಟ್ ನಿವಾಸಿಯೊಬ್ಬರು ಅಸ್ವಸ್ಥಗೊಳ್ಳುತ್ತಾರೆ. ಆ ಸಂದರ್ಭ ಆಂಬ್ಯುಲೆನ್ಸ್ ಗೇಟ್ ಒಳಗಡೆ ಬರಲಾರದೇ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಚಿಕ್ಕ ಹುಡುಗನಿಗೆ ಅಸ್ತಮಾ ಬಂದಾಗ ಕೂಡ ಇದೇ ಪರಿಸ್ಥಿತಿ ಅಂತ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಳೆದ 2 ದಿನದಿಂದ ಪಾಲಿಕೆ ಅಧಿಕಾರಿಗಳು, ಶಾಸಕರು ಪ್ರತಿಕ್ರಿಯಿಸ್ತಿಲ್ಲ ಅಂತ ಆರೋಪಿಸಿರೋ ನಿವಾಸಿಗಳ ಆಕ್ರೋಶಕ್ಕೆ ಮಣಿದ ವಲಯ ಆಯುಕ್ತ ತ್ರಿಲೋಕ್ ಚಂದ್ರ, ಜಂಟಿ ಆಯುಕ್ತ ವೆಂಕಟಾಚಲಪತಿ ಸ್ಥಳಕ್ಕೆ ಬಂದು ಸಮಸ್ಯೆ ಪರಿಶೀಲನೆ ಮಾಡಿದ್ರು.

ಚಿಕ್ಕ ಮಕ್ಕಳು ಶಾಲೆಗೆ ಹೋಗೊದ್ರಿಂದ ಹಿಡಿದು ದೊಡ್ಡವರು ಕೆಲಸಕ್ಕೆ, ರೋಗಿಗಳು ಆಸ್ಪತ್ರೆಗೆ ಹೋಗಲು ಸಹ ಸಮಸ್ಯೆ ಆಗ್ತಿದೆ. ಹೀಗಾಗಿ ಆಶ್ವಾಸನೆ ಕೇವಲ ಮಾಧ್ಯಮದ ಮುಂದೆ ಮಾತ್ರ ಸೀಮಿತ ಆಗದೆ ಆದಷ್ಟು ಬೇಗ ಕಾರ್ಯಗತ ಆಗಬೇಕು ಅನ್ನೋದೇ ನಮ್ಮ ಆಶಯ.

-‌ ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Manjunath H D
PublicNext

PublicNext

04/08/2022 09:39 pm

Cinque Terre

33.2 K

Cinque Terre

0

ಸಂಬಂಧಿತ ಸುದ್ದಿ