ಬೆಂಗಳೂರು : ರಾಜ್ಯದ ನೆತ್ತಿಮೇಲೆ ವರುಣನ ತೂಗುಗತ್ತಿ ಬೆಂಗಳೂರು ಸೇರಿ ಹಲವೆಡೆ ನಾಲ್ಕು ದಿನ ಮಹಾಮಳೆ ಸಾಧ್ಯತೆ. ಕೆಲವು ದಿನಗಳಿಂದ ವರ್ಷಧಾರೆಗೆ ಬೆಂಗಳೂರಿನ ಜನ ಬೇಜಾರಾಗಿ ಹೋಗಿದ್ದಾರೆ ಇನ್ನು ನಾಲ್ಕು ದಿನಗಳ ಕಾಲ ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ಈಗ ನೀಡಿದೆ ಮತ್ತು ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಜಿಟಿ ಜಿಟಿ ಮಳೆಯಲ್ಲಿ ಬೆಂಗಳೂರಿನ ಜನ ತಮ್ಮ ಕೆಲಸಕಾರ್ಯಗಳಲ್ಲಿ ನಿರತರಾಗಿದ್ದಾರೆ. ಕೆಲ ನಿಮಿಷ ಮಳೆ ಬಂದರೆ ಇನ್ನೂ ಕೆಲ ನಿಮಿಷ ಬಿಸಿಲು ಕಂಡು ಬರುತ್ತದೆ ಈ ಸ್ಥಿತಿ ಬೆಂಗಳೂರಿನಲ್ಲಿ ಸದ್ಯಕ್ಕೆ ಕಂಡುಬರುತ್ತಿದೆ. ಇಂದೂ ಕೂಡ ಬೆಂಗಳೂರಿನ ಜನ ತಮ್ಮ ಕೆಲಸ ಕಾರ್ಯಗಳಿಗೆ ಮಳೆಯಲ್ಲಿ ಹೋಗುವ ದೃಶ್ಯಗಳು ಕಂಡು ಬಂತು. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಇದೇ ರೀತಿ ವೆದರ್ ಎಂಜಾಯ್ ಮಾಡಬೇಕು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
11/07/2022 08:07 pm