ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಅನುಗ್ರಹ ಲೇಔಟ್ ನಿವಾಸಿಗಳಿಗೆ ಮಳೆ ಹಾಕಿದ ದಿಗ್ಬಂಧನ

ಬೆಂಗಳೂರು : ಬೊಮ್ಮನಹಳ್ಳಿಯ ಒಂದೊಂದು ರಸ್ತೆಗಳು ಕೂಡ ಜಲಾವೃತಗೊಂಡಿದೆ ಅದರಲ್ಲೂ ಬೊಮ್ಮನಹಳ್ಳಿಯ ಅನುಗ್ರಹ ಲೇಔಟ್'ನಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಸಂಪೂರ್ಣವಾಗಿ ನೀರಿನಿಂದ ಭರ್ತಾಯಾಗಿವೆ.

ಹೌದು ! ಮಳೆ ರಭಸಕ್ಕೆ ರಸ್ತೆ ಜಲಾವೃತವಾಗಿ ಅನುಗ್ರಹ ಲೇಔಟ್'ನ ಜನರು ತಮ್ಮ ಮನೆಗಳಿಂದ ಹೊರ ಬರಲು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.

ಕಳೆದ ಹತ್ತು ವರ್ಷಗಳಿಂದ ಇದೇ ಸಮಸ್ಯೆಯನ್ನು ಅನುಭವಿಸುತ್ತಿರುವ ಲೇಔಟ್ ಜನರು ಸ್ಥಳೀಯ ಪ್ರತಿನಿಧಿಗಳಿಗೆ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಎಷ್ಟೇ ಬಾರಿ ದೂರು ನೀಡಿದ್ದರೂ ಇಲ್ಲಿ ಯಾವುದೇ ರೀತಿಯ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಇದರಿಂದ ಸ್ಥಳೀಯ ನಿವಾಸಿಗಳು ಮಳೆಗಾಲದಲ್ಲಿ ನಿತ್ಯ ಪರದಾಡುವ ಸ್ಥಿತಿ ಎದುರಾಗಿದೆ.

ನೆನ್ನೆ ಸಂಜೆ ಸುರಿದ ಭಾರೀ ಮಳೆಗೆ ಅನುಗ್ರಹ ಲೇಔಟ್ ರಸ್ತೆಗಳು ಸಂಪೂರ್ಣವಾಗಿ ನೀರಿನಿಂದ ತುಂಬಿ ಹೋಗಿದ್ದು ಮನೆಗಳ ಮುಂಭಾಗ ನಿಲ್ಲಿಸಿದ್ದ ವಾಹನಗಳು ಕೆಟ್ಟು ನಿಂತಿದ್ದು ಜನರಿಗೆ ಒಂದಲ್ಲಾ ಒಂದು ಸಮಸ್ಯೆ ಕಾಡುತ್ತಲಿದೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Nagesh Gaonkar
PublicNext

PublicNext

19/05/2022 01:54 pm

Cinque Terre

36.75 K

Cinque Terre

0

ಸಂಬಂಧಿತ ಸುದ್ದಿ