ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಚ್ಎಸ್ಆರ್ ಲೇಔಟ್ ಮಂಗಮ್ಮನಪಾಳ್ಯ ಬೊಮ್ಮನಹಳ್ಳಿ ಗಾರೆಪಾಳ್ಯ ಸೇರಿದಂತೆ ಭಾನುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಸ್ಥಳಗಳಿಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ಭೇಟಿ ನೀಡಿದ್ದಾರೆ.
ಇನ್ನು ರಣ ಮಳೆಗೆ ಸುಮಾರು ನೂರಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.ಜತಗೆ ನಾಲ್ಕರಿಂದ ಐದು ಮಂದಿಗೆ ಗಾಯಗಳಾಗಿವೆ ಸಾಕಷ್ಟು ವಾಹನಗಳಿಗೆ ಹಾನಿಯಾಗಿದೆ.
ಸದ್ಯ ಬಿದ್ದಿರುವ ಮರಗಳನ್ನು ತೆರವು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Kshetra Samachara
09/05/2022 09:28 pm