ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕು ವ್ಯಾಪ್ತಿಯ ಎಲೆಮಲ್ಲಪ್ಪ ಶೆಟ್ಟಿ ಕೆರೆ ಅಭಿವೃದ್ಧಿ ಕಾಣದೇ ಅವಸಾನದ ಅಂಚಿನಲ್ಲಿದೆ. ಕೆರೆ ಅಭಿವೃದ್ಧಿ ಬಗ್ಗೆ ಸರ್ಕಾರ ನೀರವ ಮೌನ ವಹಿಸಿದೆ . ಅಭಿವೃದ್ಧಿ ಕಾಣದ ಎಲೆ ಮಲ್ಲಪ್ಪಶೆಟ್ಟಿ ಕೆರೆಯ ಅಂಗಳ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕಟ್ಟಡ ತ್ಯಾಜ್ಯ ಮೆಡಿಕಲ್ ವೇಸ್ಟೇಜ್ , ವಿಲೇವಾರಿ ಆಗದ ಕಸ ಎಲ್ಲೆಂದರಲ್ಲಿ ಬಿದ್ದು ಕೆರೆಯು ದಿನದಿಂದ ದಿನಕ್ಕೆ ಕುಖ್ಯಾತಿ ಪಡೆದಿದೆ.
ಕೆರೆ ಕೆ.ಆರ್.ಪುರ ಹಾಗೂ ಮಹದೇವಪುರ ಕ್ಷೇತ್ರದ ಗಡಿ ಭಾಗದಲ್ಲಿದ್ದು ಗ್ರಾಮ ಪಂಚಾಯ್ತಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುತ್ತೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದಿನದಿಂದ ದಿನಕ್ಕೆ ರಾಶಿಗಟ್ಟಲೆ ಕಸದ ತ್ಯಾಜ್ಯ ಕೆರೆಯ ಒಡಲು ಸೇರುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ . ಅಲ್ಲದೇ ಎಲೆ ಮಲ್ಲಪ್ಪಶೆಟ್ಟಿ ಕೆರೆ ಜೋಡು ಹುಲ್ಲುಗಾವಲಿನಿಂದ ಸಂಪೂರ್ಣವಾಗಿ ಆವೃತ್ತಗೊಂಡು ಕೊಳಚೆ ನೀರಿನಿಂದ ದುರ್ನಾತ ಹಬ್ಬುತ್ತಿದೆ .
ಕೆರೆಯ ಮಧ್ಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ೭೫ ಹಾದು ಹಾದುಹೋಗಿದೆ. ರಾತ್ರಿ ವೇಳೆ ಸರ್ವಿಸ್ ರಸ್ತೆಗಳಲ್ಲಿ ದುಷ್ಕರ್ಮಿಗಳು ಮಾಂಸದಂಗಡಿಗಳ ತ್ಯಾಜ್ಯ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಸುರಿಯುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಕೆರೆ ಅಂಗಳಕ್ಕೆ ಸೇರುತ್ತಿರುವ ಕಸದ ತ್ಯಾಜ್ಯದಲ್ಲಿನ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ಜಾನುವಾರುಗಳು ಸೇವಿಸುತ್ತಿರುವುದು ಜಾನುವಾರಿನ ಮಾಲೀಕರಿಗೆ ಎಲ್ಲಿಲ್ಲದ ಆತಂಕ ಸೃಷ್ಟಿಸಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕೆರೆ ಸ್ವಚ್ಛತೆಗೆ ಮುಂದಾಗಿ ಸುತ್ತಲಿನ ಪರಿಸರವನ್ನು ಕಾಪಾಡಬೇಕು ಅನ್ನೋದು ಸ್ಥಳೀಯರ ಬೇಡಿಕೆ.
Kshetra Samachara
23/12/2021 11:01 pm