ಬೆಂಗಳೂರು: ಬೆಂಗಳೂರಿನ ರೈನ್ ಬೋ ಡ್ರೈವ್ ಲೇಔಟ್ ಗೆ ಇಂದು ಡಿ.ಸಿ. ಶ್ರೀನಿವಾಸ್ ಭೇಟಿ ನೀಡಿದರು. ಪ್ರತಿ ಬಾರಿ ಮಳೆ ಬಂದಾಗ ಈ ಲೇಔಟ್ ಜಲಾವೃತಗೊಳ್ಳುತ್ತಿದ್ದು, ಈ ಬಾರಿಯ ಮಳೆಗೆ ಸಂಪೂರ್ಣವಾಗಿ "ಮುಳುಗಿ" ಯೇ ಹೋಗಿದೆ!
ಎರಡು ದಿನಗಳು ಕಳೆದರೂ ನೀರಿನ ಪ್ರಮಾಣ ಇಳಿಕೆ ಆಗಿಲ್ಲ. ಇಲ್ಲಿನ ನಿವಾಸಿಗಳು ಸ್ಥಳಕ್ಕೆ ಬೆಂಗಳೂರು ಡಿ.ಸಿ. ಮತ್ತು ಸ್ಥಳೀಯ ಶಾಸಕರು ಭೇಟಿ ನೀಡಬೇಕೆಂದು ಒತ್ತಾಯಿಸಿದ್ದರು.
ಬಡಾವಣೆಗೆ ಡಿ.ಸಿ. ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸ್ಥಳೀಯರೊಂದಿಗೆ ಮಾತನಾಡಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
PublicNext
06/09/2022 07:46 pm