ಬೆಂಗಳೂರು: ಯಲಹಂಕ ವಲಯದ 1,2,3,4 ವಾರ್ಡ್ ಗಳಲ್ಲಿ ಹೇಗೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಯಲಹಂಕ ಕೆರೆ ಹೇಗೆ ಪಿಕ್ನಿಕ್ ಸ್ಪಾಟ್ ರೀತಿ ಪರಿವರ್ತನೆಯಾಗಿದೆ. ಕೇಂದ್ರೀಯ ವಿಹಾರ ಅಪಾರ್ಟ್ ಮೆಂಟ್ ರಾಜಕಾಲುವೆ ಕಾಮಗಾರಿ, ಯಲಹಂಕ ಉಪನಗರದ ಪಾರ್ಕ್ ಗಳು, ವೈಟ್ ಟ್ಯಾಪಿಂಗ್ ಕಾಮಗಾರಿ, ಅಟ್ಟೂರು ವಾರ್ಡ್ ಸಸ್ಯಕ್ಷೇತ್ರದಲ್ಲಿ ಬೆಳೆಯಲಾಗ್ತಿರುವ ಸಸ್ಯಗಳ ಬಗ್ಗೆ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಸಮಗ್ರ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ʼಪಬ್ಲಿಕ್ ನೆಕ್ಸ್ಟ್ʼ ಜತೆಗೆ EXCLUSIVE ಆಗಿ ಮಾತನಾಡಿದ ಕಮಿಷನರ್, ಯಲಹಂಕ ವಲಯದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ್ದೇನೆ. ಯಲಹಂಕ ಕೆರೆ ಚೆನ್ನಾಗಿ ಅಭಿವೃದ್ಧಿ ಆಗ್ತಿದೆ. ಕೇಂದ್ರೀಯ ವಿಹಾರದ ಸಮಸ್ಯೆ ಬಗೆಹರಿಯಲಿದೆ ಎಂದರು.
ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಮಾತನಾಡಿ, ಹತ್ತಾರು ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಬಿಬಿಎಂಪಿ ವಿಶೇಷ ಆಯುಕ್ತರು, ಯಲಹಂಕ ವಲಯದ ಜಂಟಿ ಆಯುಕ್ತರು ಮತ್ತು ಬಿಬಿಎಂಪಿ ಸಿಬ್ಬಂದಿ ಉಪಸ್ಥಿತರಿದ್ದರು.
PublicNext
03/06/2022 12:20 pm