ಸರ್ವಜ್ಞನಗರ: ಒಂದು ಕಡೆ ರಾಜ್ಯದಲ್ಲಿ ಹಿಜಾಬ್, ಹಲಾಲ್ ಗಲಾಟೆ ನಡುವೆ ಹುಬ್ಬಳ್ಳಿಯಲ್ಲಿ ಕೋಮು ಸಂಘರ್ಷ ಕೂಡ ಏರ್ಪಟ್ಟಿದೆ. ಈ ನಡುವೆ ರಂಜಾನ್ ಹಬ್ಬ ಕೂಡ ಬಂದಿದ್ದು ರಾಜ್ಯದ ನಾನಾ ಕಡೆ ಮುಸ್ಲಿಂ ಬಾಂಧವರು ಶಾಂತಿ ಸೌಹಾರ್ದತೆಗಾಗಿ ಇಫ್ತಿಯಾರ್ ಕೂಟಗಳನ್ನು ಏರ್ಪಡಿಸುತ್ತಿದ್ದಾರೆ.
ನಿನ್ನೆ ಕೂಡ ಖಾದ್ರಿಯಾ ಮಸೀದಿಯಲ್ಲಿ ಎಲ್ಲಾ ಧರ್ಮಗುರುಗಳು ಮತ್ತು ಮುಖಂಡರನ್ನು ಆಹ್ವಾನಿಸಿ ಇಫ್ತಿಯಾರ್ ಏರ್ಪಡಿಸಿದ್ರು. ಖಾದ್ರಿಯಾ ಮಸೀದಿಯ ಟ್ರಸ್ಟಿ ಉಸ್ಮಾನ್ ಶರೀಫ್ ಆಯೋಜಿಸಿದ್ದ ಈ ಕೂಟದಲ್ಲಿ ಸಿಎಂ ಇಬ್ರಾಹಿಂ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು.ಇದೇ ವೇಳೆ ಮಾತನಾಡಿದ ಫಾದರ್ ಬಿಷಪ್ ಡೇವಿಡ್, ಇದು ಶಾಂತಿಯ ಸಂಕೇತ. ನಾವೆಲ್ಲರೂ ಒಂದೇ ಎಂದು ಹೇಳಿದ್ರು. ಉಸ್ಮಾನ್ ಶರೀಫ್ ಕೂಡ ಮಾತನಾಡಿ ಕಳೆದ ಒಂಭತ್ತು ವರ್ಷದಿಂದ ಇಫ್ತಿಯಾರ್ ನಡೆಯುತ್ತಿದ್ದು, ಇದ್ರಲ್ಲಿ ಹಿಂದೂ ಮುಸ್ಲಿಂ ಎಲ್ರೂ ಭಾಗಿಯಾಗಿ ಇಫ್ತಿಯಾರ್ ಊಟಮಾಡಿದ್ದಾರೆ ಎಂದು ಹೇಳಿದ್ರು.
Kshetra Samachara
23/04/2022 04:46 pm