ಬೆಂಗಳೂರು: ಬೆಂಗಳೂರು ನಗರ ಸಂಚಾರ ಪೊಲೀಸರು ಎಷ್ಟೇ ಪ್ರಯತ್ನಪಟ್ಟರೂ ಹೆಬ್ಬಾಳ ಜಂಕ್ಷನ್ ಫ್ಲೈಓವರ್ ಟ್ರಾಫಿಕ್ ಜಾಮ್ ಕಡಿಮೆ ಆಗುತ್ತಿಲ್ಲ. ಹತ್ತು ದಿನಗಳ ಹಿಂದೆ ನಗರ ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡರ ತಂಡ ಅಧ್ಯಯನ ನಡೆಸಿ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಯತ್ನಿಸಿದರು. ಏರ್‌ಪೋರ್ಟ್ ಮತ್ತು ಬೆಂಗಳೂರಿಗೆ ಹೋಗಿ ಬರುವ ವಾಹನ ಸಂಚಾರ ರಸ್ತೆಗಳ ಬದಲಿ ವ್ಯವಸ್ಥೆ, ಸರ್ವೀಸ್ ರಸ್ತೆ ಮಾರ್ಗಸೂಚಿ ಬದಲಿಸಿದರೂ ಪ್ರಯೋಜನವಾಗಿಲ್ಲ. ಸದ್ಯ ಏರ್‌ಪೋರ್ಟ್ ರಸ್ತೆಯಲ್ಲಿ ಸಂಚರಿಸುವ ಬಸ್‌ಗಳ ಸ್ಟಾಪ್ ಮತ್ತು ಆಟೋಗಳ ಹಾವಳಿ ಸಹ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ. ಅಳಿಯ ಅಲ್ಲ ಮಗಳಗಂಡ ಎಂಬಾಂತಾಗಿದೆ. ಹೆಬ್ಬಾಳ ಫ್ಲೈಓವರ್ ಟ್ರಾಫಿಕ್ ಜಾಮ್ ಸ್ಥಿತಿಗತಿ. ಈ ಬಗ್ಗೆ ಹೆಬ್ಬಾಳ ಟ್ರಾಫಿಕ್ ಜಾಮ್ ಸ್ಪಾಟ್‌ನಿಂದ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ರಿಯಾಲಿಟಿ ಚಕ್ Walkthrough ಇಲ್ಲಿದೆ ನೋಡಿ.
PublicNext
18/07/2022 12:13 pm