ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೇತಾಜಿ ಜನ್ಮಜಯಂತಿ ಆಚರಿಸಿದ ಶಾಲಾ ಮಕ್ಕಳು

ವರದಿ: ರಂಜಿತಾಸುನಿಲ್.

ಬೆಂಗಳೂರು: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ನೇತಾಜಿ ಅವರ 125ನೇ ಜನ್ಮಜಯಂತಿ ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ. 1943ರ ಜುಲೈ 12‌ರಂದು ದೇಶದ ಮೊಟ್ಟ ಮೊದಲ ಮಹಿಳಾ ಸೈನ್ಯ ಝಾನ್ಸಿ ರಾಣಿ ರೆಜಿಮೆಂಟನ್ನು ನೇತಾಜಿ ಅವರು ಸ್ಥಾಪಿಸಿದ್ದರು.

ಇಂದು ಮಹಿಳೆಯರಿಗೆ ಅತ್ಯಂತ ಸ್ಫೂರ್ತಿದಾಯಕವಾದ ದಿನ. ಈ ದಿನದ ಹಿನ್ನೆಲೆಯಲ್ಲಿ ಝಾನ್ಸಿ ರಾಣಿ ರೆಜಿಮೆಂಟ್ ಹಾಗೂ ನೇತಾಜಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಸಂಘಟನೆಯಿಂದ ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕೆಂಗೇರಿ ಉಪನಗರದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಬಡಾವಣೆಯ ನಾಗರಿಕರು ಶಿಕ್ಷಕರು ಬಿಬಿಎಂಪಿ ಪೌರಕಾರ್ಮಿಕರು ಪಾಲ್ಗೊಂಡಿದ್ದರು. ಎಂಐಎಂಎಸ್ಎಸ್ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷ ಭಾಗ್ಯಲಕ್ಷ್ಮಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.

Edited By :
Kshetra Samachara

Kshetra Samachara

12/07/2022 07:21 pm

Cinque Terre

2.28 K

Cinque Terre

0

ಸಂಬಂಧಿತ ಸುದ್ದಿ