ಬೆಂಗಳೂರು: ಒಂದು ಕಡೆ ಮುಳ್ಳು, ಮತ್ತೊಂದು ಕಡೆ ಸಿಮೆಂಟ್ ಹಾಕಿ ಕಬ್ಬಿಣದ ಕಂಬ ಹೂಡಿರುವ ದೃಶ್ಯಗಳು. ಇದನ್ನೆಲ್ಲ ನೋಡ್ತಿದ್ರೆ, ಹೊಲಕ್ಕೆ ಹಂದಿ ಬರುತ್ತೆ ಅಥವಾ ಕಳ್ಳರು ಬೆಳೆಯನ್ನು ಕಿತ್ತುಕೊಳ್ಳಬಹುದು ಎಂದು ರೈತರು ಮುಂಜಾಗ್ರತಾ ಕ್ರಮ ವಹಿಸಿದ ಹಾಗಿದೆ ಅನಿಸುತ್ತೆ.. ಆದ್ರೆ ಕಥೆ ಬೇರೆನೆ ಇದೆ ಸ್ವಾಮಿ.. ಈ ಗೇಟ್ ಮುಂದೆ ಇಷ್ಟೊಂದು ಜನಗಳು ಯಾಕಿದ್ದಾರೆ?
ಏನೊ ಮರ್ಡರ್ ಆಗಿರಬೇಕು ಅಂದುಕೊಳ್ಳಬಹುದು. ಅದೇನೂ ಇಲ್ಲ. ಪಂಚಾಯತಿ ಜಾಗದಲ್ಲಿರುವ ಗೋಮಾಳ ಜಾಗವನ್ನ ಅಲೆಮಾರಿ ಜನ ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಾಣ ಮಾಡಿಕೊಂಡು ಸೇಫ್ಟಿಗೆ ರಾತ್ರೋ ರಾತ್ರಿ ಗೇಟ್ ನಿರ್ಮಾಣ ಮಾಡಿಕೊಂಡು ಸ್ಥಳೀಯರನ್ನು ಎದುರಿಸಲು ಸಿದ್ಧವಾಗಿದ್ದಾರೆ.
ಹೌದು ಸರ್ಕಾರಿಯ ಗೋಮಾಳ ಜಾಗ ಒತ್ತುವರಿ ಮಾಡಿಕೊಂಡ ಬೇರೆ ಮೂಲದ ಜನ, ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಧಿಕ್ಕಾರ ಕೂಗುತ್ತಿರುವ ಘಟನೆ ಅಗರ ಗ್ರಾಮ ಪಂಚಾಯಿತಿ ಭಾಗದ ಅಗರ ಕಾಲೋನಿಯಲ್ಲಿ ನಡೆದಿದೆ. 180 ಎಕರೆಯ ಜಾಗದಲ್ಲಿ ಸರ್ವೆ ನಂ 28 ರ 7 ಎಕರೆ ಜಾಗ ನಮಗೆ ಸೇರಿದ್ದು ಎಂದು ಅಲೆಮಾರಿ ಜನ ರಾತ್ರೋ ರಾತ್ರಿ ಶೆಡ್ ಗಳನ್ನ ನಿರ್ಮಿಸಿಕೊಂಡಿದ್ದಾರೆ. ಸ್ಥಳಿಯರು ಕೇಳಲು ಹೋದ್ರೆ ಕೋರ್ಟ್ ಮೂಲಕ ಬಂದಿದ್ದೇವೆ ಎಂದು ಗಲಾಟೆ ಮಾಡ್ತಿದ್ದಾರಂತೆ. ಇದರ ಹಿಂದೆ ಅಗರ ಪಂಚಾಯಿತಿಯ ಸ್ಥಳೀಯರ ಕೈವಾಡ ಇದ್ಯಂತೆ.
ಊರಿನ ಜನ ನಮ್ಗೆ ಒಂದು ಸೈಟ್ ಇಲ್ಲ. ಇನ್ನ ಬೇರೆಯವ್ರಿಗೆ ಯಾಕ್ ಬಿಡಬೇಕು ಎಂದು ಅಗ್ರಹಿಸಿ ಅಲೆಮಾರಿ ಜನಕ್ಕೆ ಧಿಕ್ಕಾರ ಕೂಗುತ್ತಿದ್ದಾರೆ. ಸದ್ಯಕ್ಕೆ ಈ ಸಂಬಂಧ ಸ್ಥಳೀಯರು ಅಲೆಮಾರಿ ಜನ ಕೋರ್ಟ್ ಮೆಟ್ಟಿಲೇರಿದ್ದು, ಈ ಜಾಗ ಯಾರ ಪಾಲಾಗಬೇಕೆಂದು ತಿಳಿಯಬೇಕಿದೆ. ಒಟ್ನಲ್ಲಿ ಜಾಗದಲ್ಲಿ ಎಲ್ಲರನ್ನೂ ಖಾಲಿ ಮಾಡಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಗ್ಗಲಿಪುರ ಪೊಲೀಸ್ರು ನಿಗವಹಿಸಿದ್ದು ಶ್ಲಾಘನೀಯ..
ರಿಪೋರ್ಟ್- ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
11/07/2022 08:47 pm