ಬೆಂಗಳೂರು: ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಆರ್ ವಿ ಸ್ಟೇಷನ್ ಎಲ್ಲೋ ಲೈನ್ ಫೇಸ್-2 ಮೆಟ್ರೋ ರೈಲು ಮಾರ್ಗವನ್ನು 2023ರ ಡಿಸೆಂಬರ್ ಅಂತ್ಯದಲ್ಲಿ ಕಾಮಗಾರಿ ಮುಗಿಸುವ ಭರವಸೆಯನ್ನು ಬಿಎಂಆರ್ ಸಿಎಲ್ ನೀಡಿದೆ.
ಈ ಮೆಟ್ರೋ ರೈಲು ಮಾರ್ಗದ ಕಾಮಗಾರಿಯನ್ನು 2021ರ ಅಂತ್ಯದಲ್ಲಿ ಮುಗಿಸುತ್ತೇವೆ ಎಂದು ಬಿಎಂಆರ್ ಸಿಎಲ್ ಮುಂಚೆ ಹೇಳಿತ್ತು. ಕಾರಣಾಂತರಗಳಿಂದ ಮತ್ತೆ 2022ರ ಅಂತ್ಯದಲ್ಲಿ ಕಾಮಗಾರಿ ಮುಗಿಸುತ್ತೇವೆ ಎಂದರು. ಆದರೆ ಈಗ ಮತ್ತೆ 2023ರ ಅಂತ್ಯಕ್ಕೆ ಮೆಟ್ರೋ ರೈಲು ಮಾರ್ಗ ಕಾಮಗಾರಿ ಪೂರ್ಣವಾಗಲಿದೆ ಎಂದು ಬಿಎಂಆರ್ಸಿಎಲ್ ಭರವಸೆ ನೀಡಿದೆ. ಇನ್ನು ಸದ್ಯದ ಮೆಟ್ರೋ ಕಾಮಗಾರಿ ಹೇಗೆ ನಡೆಯುತ್ತಿದೆ ಎಂದು ಸ್ಥಳದಿಂದ ನಮ್ಮ ಪ್ರತಿನಿಧಿ ನವೀನ್ ನೀಡಿರುವ ವರದಿ ಇಲ್ಲಿದೆ.
ನವೀನ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
23/08/2022 06:29 pm