ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಈ ಕೆಆರ್ ಪುರಂ ಬ್ರಿಡ್ಜ್ ಎಷ್ಟು ಸೇಫ್ ಅನ್ನೋ ಪ್ರಶ್ನೆ ಉದ್ಭವಿಸಿದೆ. ಕೆಆರ್ ಪುರಂ ಹೋಗೋ ಮಾರ್ಗದಲ್ಲಿ ಸಿಗೋ ಬ್ರಿಡ್ಜ್ ಇರುವ ಮುಖ್ಯ ರಸ್ತೆಯ ಗೋಡೆ ಜನರಿಗೆ ಯಮಸ್ವರೂಪಿಯಂತೆ ಗೋಚರಿಸುತ್ತಿದೆ. ಬ್ರಿಡ್ಜ್ ನ ಕ್ಲೀನಿಂಗ್ ಬಿಬಿಎಂಪಿ ಮಾಡ್ತಿದೆ, ಉಳಿದ ಕೆಲಸ ಯಾರು ಮಾಡಬೇಕು ? ಬಿಬಿಎಂಪಿಯನ್ನು ಕೇಳಿದ್ರೆ ನಮಗೆ ಗೊತ್ತಿಲ್ಲ ಅನ್ನುತ್ತೆ. ಇನ್ನು ರೈಲ್ವೆ ಇಲಾಖೆಯ ಪ್ರತಿಕ್ರಿಯೆ ಇಲ್ಲ. ಹಾಗಾದ್ರೆ ಈ ಬ್ರಿಡ್ಜ್ ಮೈಂಟೆನೆನ್ಸ್ ಯಾರಿಗೆ? ಈ ಹ್ಯಾಂಗಿಂಗ್ ಬ್ರಿಡ್ಜ್ ಹೀಗೆ 3 ವರ್ಷಗಳಿಂದ ಜನರನ್ನು ಕಾಡುತ್ತಲೇ ಇದೆ.
ಬ್ರಿಡ್ಜ್ ಗೋಡೆಯ ಒಂದು ಬದಿ ಸಂಪೂರ್ಣ ಕುಸಿದಿದೆ. ಚಿಕ್ಕ ಅಪಘಾತವಾದ್ರೂ ಸೀದಾ ಬ್ರಿಡ್ಜ್ ಕೆಳಗೆ ಬೀಳೋದು ಗ್ಯಾರಂಟಿ. ಬ್ರಿಡ್ಜ್ ಕೆಳಭಾಗದ ರಸ್ತೆ ಬದಿ ಸಾಕಷ್ಟು ವ್ಯಾಪಾರಿಗಳು ಕುಳಿತು ಕೊಳ್ತಾರೆ. ಆಕಸ್ಮಾತ್ ಅವರ ಮೇಲೆ ಗೋಡೆ ಬಿದ್ರೆ ಯಾರು ಜವಾಬ್ದಾರಿ? ಪಾಲಿಕೆಯವ್ರನ್ನ ಕೇಳಿದ್ರೆ ಇದು ನಮಗೆ ಸೇರಿದ್ಯಾ, ಇಲ್ವಾ ಅನ್ನೋ ಕ್ಲಾರಿಟಿನೇ ಇಲ್ಲ ಅಂತಾರೆ.
ಬ್ರಿಡ್ಜ್ ಪಕ್ಕ ಇರೋ ಫುಟ್ ಪಾತ್ ಬಹುತೇಕ ರೋಡ್ ಗೆ ಸಮವಾಗಿದೆ. ಫುಟ್ ಪಾತ್ ಮೇಲೆ ಎದ್ದ ಬೃಹತ್ ಹೊಂಡ ನೋಡಿದ್ರೆ ಮೈ ಜುಂ ಅನ್ನುತ್ತೆ! ಬ್ಯಾರಿಕೇಡ್ ಹಾಕಿ ಕುಸಿದ ಗೋಡೆ ಮುಚ್ಚುವ ಪ್ರಯತ್ನ ಸ್ಥಳೀಯರಿಂದ ಆಗ್ತಿದೆ. ಆದ್ರೆ, ಬ್ಯಾರಿಕೇಡ್ ಪಕ್ಕ ನಡೆಯಬೇಕು ಅಂದ್ರೂ ರೋಡಿಗಿಳಿಯಲೇಬೇಕು!
ಘನ ವಾಹನಗಳು ಓಡಾಡುವಾಗ ಅಪಘಾತ ಆದ್ರೆ ಯಾರು ಹೊಣೆ? ಬ್ರಿಡ್ಜ್ ಕೆಳಭಾಗ ಸಾಕಷ್ಟು ಜನ ಓಡಾಡ್ತಾ ಇರ್ತಾರೆ. ಬ್ರಿಡ್ಜ್ ಮೇಲೆ ಅಪಘಾತ ಆದ್ರೆ ಅವರಿಗೂ ತಪ್ಪದು ಅಪಾಯ. ಜನರ ತೆರಿಗೆ ದುಡ್ಡಲ್ಲಿ ಮಾಡೋ ಅಭಿವೃದ್ಧಿ ಕೆಲಸ ನಿರ್ವಹಣೆ ಮಾಡೋಕೆ ಅಧಿಕಾರಿಗಳಿಗೆ ಏನು ಸಮಸ್ಯೆ ? ಎಂಬ ಪ್ರಶ್ನೆ ಜನರದ್ದು.
- ಗೀತಾಂಜಲಿ, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
13/07/2022 12:41 pm