ರಾಜಧಾನಿಯ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕೊಡ್ತೀವಿ ಅಂತಾ ಬಿಬಿಎಂಪಿ ಅಧಿಕಾರಿಗಳೇ ಹೇಳಿದ್ರು.ಆದ್ರೆ ಇದೀಗ ಕೋಟಿ ಕೋಟಿ ವೆಚ್ಚದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸಿ ಕಂಡವರಿಗೆ ಧಾರೆ ಎರೆದಿದ್ದಾರೆ.
ಬೆಂಗಳೂರಿನ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಪ್ರತಿವಾರ ಟ್ರಾಫಿಕ್ ಪೊಲೀಸರ ಜೊತೆ ಬಿಬಿಎಂಪಿ ಸಭೆ ನಡೆಸುತ್ತೆ.ಆದ್ರೆ ಈಗ ಆತ್ತ ಸಭೆ, ಇತ್ತ ಸೇಲ್ ಗೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಂದ ಇದೀಗ ದರ್ಬಾರ್ ನಡೆಯುತ್ತಿದೆ.
ಬಿಬಿಎಂಪಿ ಪಾರ್ಕಿಂಗ್ ಕಟ್ಟಡವನ್ನು ಖಾಸಗಿ ಕಾರ್ ಶೋ ರೂಮ್ ಗೆ ಬಿಬಿಎಂಪಿ ಸೇಲ್ ಮಾಡಿದೆ ಎನ್ನುವ ಅಪಾದನೆ ಕೇಳಿಬರುತ್ತಿದೆ. ಜೆಸಿ ರಸ್ತೆಯ ಬಿಬಿಎಂಪಿ ಮಲ್ಟಿ ಲೆವಲ್ ಪಾರ್ಕಿಂಗ್ ಕಟ್ಟಡವನ್ನ ಪಾರ್ಕಿಂಗ್ ಗಾಗಿ ಬಳಸಿಕೊಳ್ಳಲಾಗ್ತಿದೆ.
ಆದರೆ ಗ್ರೌಂಡ್ ಫ್ಲೋರ್ ಹಾಗೂ ಮೊದಲ ಮಹಡಿಯಲ್ಲಿ ಮಾತ್ರ ಪೇ & ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ಉಳಿದಂತೆ 2 ಮತ್ತು 3ನೇ ಮಹಡಿ ಪಾರ್ಕಿಂಗ್ ಬದಲು ಖಾಸಗಿ ಕಾರ್ ಕಂಪನಿಯ ಸರ್ವಿಸ್ ಸೆಂಟರ್ ಗೆ ಬಿಬಿಎಂಪಿ ನೀಡಿದೆ.
ಈಗಾಗಲೇ ಖಾಸಗಿ ಕಾರ್ ಕಂಪೆನಿಯ ಸರ್ವಿಸ್ ಸೆಂಟರ್ ಕೆಲಸ ಬಹುತೇಕ ಮುಕ್ತಾಯವಾಗಿದ್ದು,ಬಿಬಿಎಂಪಿ ಪಾರ್ಕಿಂಗ್ ಜಾಗದಲ್ಲಿ ಗೇಟ್ ಹಾಕಿ ಲಾಕ್ ಮಾಡಿ ಸರ್ವಿಸ್ ಸೆಂಟರ್ ಓಪನ್ ಮಾಡಲು ಸಿದ್ಧತೆ ಮಾಡಿಕೊಳ್ತಿದೆ.
ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಬಳಿ ಕೇಳಿದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ಹಾರಿಕೆ ಉತ್ತರ ನೀಡ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಪಾಲಿಕೆ ಜಾಗವನ್ನು ಬೇಕಾಬಿಟ್ಟಿಯಾಗಿ ಖಾಸಗಿ ಕಂಪೆನಿಗಳಿಗೆ ಧಾರೆ ಎರೆಯುತ್ತಿದರೆಂದು ಸಾರ್ವಜನಿಕ ವಲಯದಲ್ಲಿ ಅಪಾದನೆ ಕೇಳಿ ಬರ್ತಿದೆ.
ಬಿಬಿಎಂಪಿ ಅಂಧಾ ದರ್ಬಾರ್ ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಅಷ್ಟೇ ಅಲ್ಲದೇ ಪಾಲಿಕೆ ಕಡಿಮೆ ಮೊತ್ತಕ್ಕೆ ಪಾರ್ಕಿಂಗ್ ಜಾಗ ಗುತ್ತಿಗೆ ಕೊಟ್ಟು ಬಾಡಿಗೆ ಪಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡ್ತಿದ್ದಾರೆ.
ವರದಿ- (ವಿಶೇಷ ಸುದ್ದಿ) ಗೀತಾಂಜಲಿ
PublicNext
25/07/2022 03:45 pm