ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆ ಅವಾಂತರ; ವಿದ್ಯುತ್‌ ವ್ಯವಸ್ಥೆ ತತ್ತರ, ಬೆಸ್ಕಾಂ ಕಾಯಕ ನಿರಂತರ

ಬೆಂಗಳೂರು: ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಜನ ಜೀವನ ಒಂದು ಕಡೆ ತತ್ತರಿಸಿಯೇ ಹೋಗಿದೆ! ಇನ್ನೊಂದು ಕಡೆ ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ನಿರಂತರ ಕೆಲಸದಲ್ಲಿಯೇ ತೊಡಗಿದ್ದಾರೆ. ಬಿಟ್ಟು ಬಿಡದೆ ಬೀಸಿದ ಜೋರು ಗಾಳಿ, ಬಿರುಮಳೆಗೆ ನಗರದ ವಿದ್ಯುತ್‌ ಕಂಬಗಳು ಅಲ್ಲಲ್ಲಿ ನೆಲಕ್ಕೊರಗಿತ್ತು. ಕೂಡಲೇ ಬೆಸ್ಕಾಂ ಅಧಿಕಾರಿಗಳು ಬೆಂಗಳೂರು ದಕ್ಷಿಣ ವಲಯದಲ್ಲಿ ಫುಲ್ ಅಲರ್ಟ್ ಆಗಿದ್ದರು.

ರಸ್ತೆಗಳ ಮೇಲೆ ಬಿದ್ದಿರುವ ಕರೆಂಟು ಕಂಬಗಳನ್ನು ಮತ್ತು ಟ್ರಾನ್ಸ್‌ ಫಾರ್ಮರ್ ಗಳನ್ನು ಸರಿಪಡಿಸಲು ರಾತ್ರಿಯಿಂದ ಇಂದು ಸಂಜೆಯವರೆಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ದಕ್ಷಿಣ ವಲಯದಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ 10 ಟ್ರಾನ್ಸ್‌ ಫಾರ್ಮರ್ ಗಳು ಸುಟ್ಟು ಹೋಗಿತ್ತು ಮತ್ತು 25 ಕರೆಂಟ್ ಕಂಬಗಳು ಧರಾಶಯಿಯಾಗಿತ್ತು.

ಆ ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಎಲ್ಲೆಲ್ಲಿ ಟ್ರಾನ್ಸ್‌ ಫಾರ್ಮರ್ ಗಳು ಸುಟ್ಟು ಹೋಗಿತ್ತೋ ಅಲ್ಲೆಲ್ಲ ಪೂರಕ ಕರೆಂಟ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ತಡರಾತ್ರಿಯವರೆಗೂ ಸುರಿದ ಮಳೆ ಕಾರಣ ಇಂದು ಮುಂಜಾನೆ ಕೆಲಸ ಶುರು ಮಾಡಿ ಸಂಜೆವರೆಗೂ ಕರೆಂಟ್ ಕಂಬಗಳನ್ನು ಹಾಕಿ, ತಂತಿ ಅಳವಡಿಸುತ್ತಿದ್ದರು.

Edited By :
PublicNext

PublicNext

03/05/2022 01:31 pm

Cinque Terre

27.55 K

Cinque Terre

0

ಸಂಬಂಧಿತ ಸುದ್ದಿ