ಬೆಂಗಳೂರು: 2011ರ ಜನಗಣತಿ ಆಧಾರದ ಮೇಲೆ ಬಿಬಿಎಂಪಿ ವಾರ್ಡ್ ಮರು ವಿಂಗಡನೆ ಕರಡು ಸಿದ್ದಪಡಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪ್ರೆಸ್ ಮೀಟ್ ಮಾಡಿದ ಅವರು, ಕೆಲ ಕ್ಷೇತ್ರಗಳಲ್ಲಿ ವಾರ್ಡ್ ಗಳ ಸಂಖ್ಯೆ ಹೆಚ್ಚಳವಾಗಿದೆ. ಮತ್ತೆ ಕೆಲ ಕ್ಷೇತ್ರದಲ್ಲಿ ವಾರ್ಡ್ ಗಳ ಸಂಖ್ಯೆ ಕಡಿಮೆ ಆಗಿದೆ. ಶೀಘ್ರದಲ್ಲೇ ವಾರ್ಡ್ ಗಳ ಗಡಿಯನ್ನು ಪ್ರಕಟ ಮಾಡಲಾಗುತ್ತದೆ ಎಂದರು. ಇನ್ನೂ ಸಾರ್ವಜನಿಕರು ಆನ್ ಲೈನ್ ಮೂಲಕ ಹಾಗೂ ನೇರವಾಗಿ ನಗರಾಭಿವೃದ್ಧಿ ಇಲಾಖೆಯ ಕಚೇರಿಗೆ ಆಕ್ಷೇಪಣೆ ಕಳುಹಿಸಬಹುದು. ಇತಿಹಾಸಗಾರರ ಹೆಸರನ್ನು ನಾವು ಆಯಾ ಕ್ಷೇತ್ರದ ಜನರ ಭಾವನೆಗೆ ಅನುಗುಣವಾಗಿ ಇಡಲಾಗಿದೆ ಎಂದರು.
Kshetra Samachara
24/06/2022 02:44 pm