ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕದ ಹುತ್ತನಹಳ್ಳಿಯಲ್ಲಿ 30ಕೋಟಿ ಬೆಲೆಯ ಸರ್ಕಾರಿ ಗೋಮಾಳ ತೆರವು: ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲು ಸರ್ಕಾರ ಆದೇಶ

PublicNext EXCLUSIVE

ಬೆಂಗಳೂರು: ಬೆಂಗಳೂರು ಉತ್ತರ ಭಾಗಕ್ಕೆ ಇಂಟರ್ ನ್ಯಾಷನಲ್ ಏರ್ಪೋರ್ಟ್ ಬಂದಿದ್ದೆ ಬಂದಿದ್ದು ಈ ಭಾಗದ ಜಮೀನಿಗೆ ಕೋಟಿ ಕೋಟಿ ಬೆಲೆ. ಇನ್ನು ಸರ್ಕಾರದ ಜಮೀನಿದ್ದರೆ ಅದನ್ನ ಭೂಮಾಫಿಯಾ ನುಂಗಿ ನೀರು ಕುಡಿಯುತ್ತಿದೆ. ಇದೇ ರೀತಿ ಬೆಂಗಳೂರು ನಗರ ಯಲಹಂಕ ತಾಲೂಕಿನ ಹುತ್ತನಹಳ್ಳಿ ಗ್ರಾಮದ ಸರ್ವೆ ನಂ.72ಕ್ಕೆ ಸೇರಿದ 7ಎಕರೆ ಜಮೀನು ಒತ್ತುವರಿ ಆಗಿತ್ತು.

ಇದೀಗ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ರವರ ತಂಡ ಯಲಹಂಕ ತಹಶಿಲ್ದಾರ್ ನರಸಿಂಹಮೂರ್ತಿ ಮತ್ತು ಕಂದಾಯ ಇಲಾಖೆ, ಸರ್ವೆ ಅಧಿಕಾರಿಗಳು ಜೆಸಿಬಿಗಳ ಮೂಲಕ 7ಎಕರೆ ಜಾಗದ ಒತ್ತುವರಿ ತೆರವುಗೊಳಿಸಿದ್ದಾರೆ. ಇದೇ ಜಾಗದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಎಂದು ಬೋರ್ಡ್ ಹಾಕಿಸಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ಸ್ಥಳದಿಂದ ನಮ್ಮ ಹಿರಿಯ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ EXCLUSIVE Walkthrough ಇಲ್ಲಿದೆ.

Edited By :
PublicNext

PublicNext

15/05/2022 10:56 am

Cinque Terre

39.14 K

Cinque Terre

2

ಸಂಬಂಧಿತ ಸುದ್ದಿ