ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ನಮ್ಮ‌ಮೆಟ್ರೋ' 2ನೇ ಹಂತದ ಕಾಮಗಾರಿ 2028 ರ ಒಳಗೆ ಪೂರ್ಣ; ಬಿಎಂಆರ್ ಸಿಎಲ್ ಗುರಿ

ಬೆಂಗಳೂರು: 'ನಮ್ಮ‌ ಮೆಟ್ರೋ' ಎರಡನೇ ಹಂತದ ಕಾಮಗಾರಿ ಹಂತ ಹಂತವಾಗಿ ಮುನ್ನುಗ್ತಾ ಸಾಗ್ತಿದೆ. ಎರಡನೇ ಹಂತದಲ್ಲಿ ಫೇಸ್ -3 ಕಾಮಗಾರಿಯೂ ಪ್ರಗತಿಯಲ್ಲಿದೆ. 2015ರಿಂದ ಕೈಗೆತ್ತಿಗೊಂಡಿರೋ ಕಾಮಗಾರಿಯಲ್ಲಿ ಸಾಕಷ್ಟು ತಂತ್ರಜ್ಞಾನ ಬಳಕೆ ಮಾಡಲಾಗಿತ್ತು.

ಬೆಂಗಳೂರು ಸುತ್ತುವರೆದಂತೆ 105.5 ಕಿ.ಮೀ. ಉದ್ದದ ಕಾಮಗಾರಿ ಈಗ ಪ್ರಗತಿಯಲ್ಲಿದೆ. ಫೇಸ್ -3ರಲ್ಲಿ 44.65 ಕಿ.ಮೀ. ಉದ್ದದ ಕಾಮಗಾರಿ ಡಿಪಿಆರ್ ಬಿಎಂಆರ್ ಸಿಎಲ್ ಮಾಡಿಕೊಂಡಿದೆ. ವಿಶೇಷವಾದ ಮೆಟ್ರೋ ಲೈನ್ ಡಿ‌ಪಿಆರ್ ನಮ್ಮ‌ ಮೆಟ್ರೋದಲ್ಲಿರಲಿದೆ ಎಂದು ಬಿಎಂ ಆರ್ ಸಿಎಲ್ ಎಂಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ.

* ಏನದು ವಿಶೇಷ ತಂತ್ರಜ್ಞಾನ! ಹೇಗಿರಲಿದೆ ಗೊತ್ತಾ... ಆ ನಿಲ್ದಾಣ?: ಜೆ.ಪಿ. ನಗರ to ಹೆಬ್ಬಾಳ ಮಾರ್ಗವಾಗಿ ಫೇಸ್-3 ಲೈನ್ ನಿರ್ಮಾಣವಾಗ್ತಿದೆ.‌ ಹೆಬ್ಬಾಳದಿಂದ ಜೆಪಿ ನಗರದ ನಡುವೆ ಮತ್ತೊಂದು ಮೆಟ್ರೋ ಲೈನ್ ಹಾದುಹೋಗಲಿದೆ. ಯಶವಂತಪುರ ಬಳಿ ಹಾದು ಹೋಗ್ತಿದ್ದಂಗೆ ಫೇಸ್ -3 ಲೈನ್ ಗೆ ಗ್ರೀನ್ ಲೈನ್ ಅಡ್ಡಿಯಾಗುತ್ತದೆ. ಇದೇ ಜಾಗದಲ್ಲಿ ತಂತ್ರಜ್ಞಾನದ ಮೂಲಕ ಮೆಟ್ರೋ ಕಾಮಗಾರಿ ನಡೆಸಲಾಗುತ್ತದೆ. ಹೀಗಾಗಲೇ ಸಂಚಾರ ನಡೆಸುತ್ತಿರುವ ಗ್ರೀನ್ ಲೈನ್ ನಡುವೆ ಫೇಸ್ -3 ಲೈನ್ ಅಟ್ಯಾಚ್ ಮಾಡಲಾಗುತ್ತದೆ.

ವರ್ಟಿಕಲ್ ಆಧಾರದಲ್ಲಿ ಮೆಟ್ರೋ ಕಾಮಗಾರಿ ನಡೆಸುತ್ತಿದೆ. ಮೆಟ್ರೋ ನಿಗಮ ಒಂದು ಲೈನ್ ಅಂತ್ಯವಾಗ್ತಿದ್ದಂತೆ ಎತ್ತರದ ಮಾರ್ಗವಾಗಿ ಮತ್ತೊಂದು ಟ್ರೈನ್ ಪ್ರತ್ಯಕ್ಷವಾಗಲಿದೆ. ಗ್ರೀನ್ ಲೈನ್ ಮೆಟ್ರೋ ನಿಲ್ದಾಣದ ಮೇಲೆಯೇ ಫೇಸ್ -3 ಲೈನ್ ರೈಲು ಹಾದುಹೋಗಲಿದೆ. ಸಾಕಷ್ಟು ತಂತ್ರಜ್ಞಾನ ಬಳಕೆ ಮೂಲಕ ಕಾಮಗಾರಿ ನಡೆಯುತ್ತಿದೆ. ಇನ್ನು, 16333 ಕೋಟಿ ವೆಚ್ಚದಲ್ಲಿ ಫೇಸ್ 3 ಕಾಮಗಾರಿ ನಡೆಯುತ್ತಿದೆ.‌ ಈ ಕಾಮಗಾರಿ 2028ರ ವೇಳೆಗೆ ಪೂರ್ಣ ಮಾಡುವ ಗುರಿಯನ್ನು BMRCL ಹೊಂದಿದೆ.

Edited By : Somashekar
PublicNext

PublicNext

06/10/2022 02:17 pm

Cinque Terre

23.37 K

Cinque Terre

0

ಸಂಬಂಧಿತ ಸುದ್ದಿ