ಬೆಂಗಳೂರು: ಇಂದಿನಿಂದ ಮತ್ತೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಆರಂಭವಾಗಿದೆ. 3 ದಿನಗಳಿಂದ ಬ್ರೇಕ್ ಬಿದ್ದಿದ್ದ ಬುಲ್ಡೋಜರ್ ಕಾರ್ಯಾಚರಣೆ ಇಂದು ಮತ್ತೆ ಚುರುಕುಗೊಂಡಿದೆ.ಇನ್ನು ಈಗ ದೊಡ್ಡವರ ವಿಲ್ಲಾ, ಕಂಪನಿಗಳನ್ನ ಪಾಲಿಕೆ ಟಾರ್ಗೆಟ್ ಮಾಡಿರುವಂತೆ ಕಾಣುತ್ತೆ.
2 ದಿನದಿಂದ ಸರ್ವೇ ಕಾರ್ಯಾಚರಣೆಯನ್ನ ಬಿಬಿಎಂಪಿ ಮಾಡುತ್ತಿದೆ. ಸರ್ವೇ ಮಾಡಿದ ಬಹುತೇಕ ಜಾಗದಲ್ಲಿ ಜೆಸಿಬಿ ಘರ್ಜನೆ ಈಗ ಮತ್ತೆ ಶುರುವಾಗಿದೆ.ಮಹದೇವಪುರ ವಲಯದ 5 ಕಡೆ ಇಂದು ಡೆಮಾಲಿಷನ್ ಶುರುವಾಗಿದ್ದು, ವಿಲ್ಲಾಗಳು ಸೇರಿದಂತೆ 5 ಕಡೆ ತೆರವು ಕಾರ್ಯಾಚರಣೆ ಮುಂದುವರೆದಿದೆ.
ಕಸವನಹಳ್ಳಿ, ವಿಪ್ರೋ, ಸಲಾರ್ ಪುರಿಯ, ಗ್ರೀನ್ ವುಡ್ ರೆಸಿಡೆನ್ಸಿ ಸಕ್ರಾ ಆಸ್ಪತ್ರೆಯ ಹಿಂಭಾಗದ ರಸ್ತೆ, ಸ್ಟರ್ಲಿಂಗ್ ಅಪಾರ್ಟ್ ಮೆಂಟ್ ,ಪೂರ್ವ ಪಾರ್ಕ್ ರಿಡ್ಜ್ ಹಿಂದಿನ ರಸ್ತೆ, ಶೆಡ್ ಗಳ ತೆರವು ಕಾರ್ಯ ಮುಂದುವರೆದಿದೆ. ಇನ್ನು ಕಾಡುಗೋಡಿಯ ವಿಜಯಲಕ್ಷ್ಮೀ ಕಾಲೋನಿಯಲ್ಲಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು , ಬೆಳ್ಳಂದೂರಿನ ಜಲಮಂಡಳಿ ಪಕ್ಕದ ಸೇತುವೆ ತೆರವಿಗೆ ಸಿದ್ಧತೆ ನಡೆಸಲಾಗಿದೆ.
PublicNext
19/09/2022 02:31 pm