ಬೆಂಗಳೂರು ಕೋಟಿ-ಕೋಟಿ ಖರ್ಚು ಮಾಡಿ ಒತ್ತುವರಿ ಜಾಗದಲ್ಲಿ ನಿರ್ಮಿಸಿರುವ 13 ವಿಲ್ಲಾಗಳನ್ನು ಕೆಡವಲು ಅನುಮತಿಗಾಗಿ ಬಿಬಿಎಂಪಿ ಸಿಬ್ಬಂದಿ ಕಾಯುತ್ತಿದ್ದಾರೆ. ಸರ್ಜಾಪುರ ರಸ್ತೆಯ ರೈನ್ ಬೋ ಲೇಔಟ್‌ನಲ್ಲಿ ಎರಡು ರಾಜಕಾಲುವೆಗಳನ್ನು ಒತ್ತುವರಿ ಮಾಡಿ ವಿಲ್ಲಾಗಳನ್ನು ನಿರ್ಮಾಣ ಮಾಡಿಕೊಂಡಿರುವ ಆರೋಪ ಕೇಳಿ ಬರುತ್ತಿವೆ. ವಿಲ್ಲಾಗಳನ್ನು ತೆರವುಗೊಳಿಸಲು ಅಧಿಕೃತ ಆದೇಶಕ್ಕಾಗಿ ಬಿಬಿಎಂಪಿ ಸಿಬ್ಬಂದಿ ಕಾಯುತ್ತಿದ್ದಾರೆ. ಹಲವು ಬಾರಿ ಒತ್ತುವರಿ ಬಗ್ಗೆ ಕೆಆರ್ ಪುರಂನ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರಿಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿ ಅಧಿಕೃತ ಆದೇಶ ನೀಡಿದ್ರೆ ವಿಲ್ಲಾಗಳು ಢಮಾರ್ ಆಗಲಿವೆ ಎಂದು ಪಾಲಿಕೆ ಹೇಳುತ್ತಿದೆ.
ಹಾಲನಾಯಕನಹಳ್ಳಿ ಕೆರೆಗೆ ನೀರು ಹರಿದು ಹೋಗುವ ಎರಡು ರಾಜಕಾಲುವೆ ಮೇಲೆ ಸುಮಾರು 40 ಮನೆಗಳನ್ನು ಕಟ್ಟಿದ್ದಾರೆ. ಅಲ್ಲಿನ ನಿವಾಸಿಗಳು ಕೋರ್ಟ್ ಆದೇಶವನ್ನು ತಂದಿರುವ ಕಾರಣದಿಂದ ವಿಲ್ಲಾಗಳನ್ನು ತೆರವುಗೊಳಿಸಲು ವಿಳಂಬವಾಗುತ್ತಿದೆ. ಬಿಬಿಎಂಪಿ ಸರ್ವೆ ನಡೆಸಿ 35 ಮನೆಗಳನ್ನ ಗುರುತು ಮಾಡಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡರೆ ಶೀಘ್ರವೇ ತೆರವುಗೊಳಿಸಲಾಗುತ್ತದೆ.
Kshetra Samachara
14/09/2022 06:48 pm