ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಮೊದಲ ಸ್ಟೀಲ್ ಫ್ಲೈ ಒವರ್ ಕಾಮಗಾರಿ ಕಳಪೆ ಅಂತಾ ಬಿಬಿಎಂಪಿ ಒಪ್ಪಿಕೊಳ್ತಾ?

ಬೆಂಗಳೂರು: ನಗರದ ಮೊದಲ ಸ್ಟೀಲ್ ಫ್ಲೈ ಒವರ್ ಕಾಮಗರಿ ಕಳಪೆ ಎಂಬುದನ್ನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪರೋಕ್ಷವಾಗಿ ಒಪ್ಪಿಕೊಳ್ತಾ? ಎನ್ನುವ ಶಂಕೆ ಶುರುವಾಗಿದೆ.

ಸಂಪೂರ್ಣ ಉದ್ಘಾಟನೆಗೂ ಮುನ್ನವೇ ಕಳಪೆ ಕಾಮಗಾರಿಯಿಂದ ಪಾಲಿಕೆ ಮುಜುಗರಕ್ಕೆ ಒಳಗಾದಂತೆ ಕಾಣ್ತಿದೆ. ನಗರದ ಮೊದಲ ಸ್ಟೀಲ್ ಫ್ಲೈ ಓವರ್ ಎಂಬ ಖ್ಯಾತಿಗೆ ಒಳಗಾಗಿರೋ ಶಿವಾನಂದ ಫ್ಲೈ ಓವರ್‌ನ ಗುಣಮಟ್ಟ ಪರಿಶೀಲನೆಗೆ ಪಾಲಿಕೆ ಮುಂದಾಗಿತ್ತು. ಇದೀಗ ಮೂರನೇ ಸಂಸ್ಥೆಯಿಂದ ಗುಣಮಟ್ಟ ಪರಿಶೀಲನೆ ನಡೆಸಲು ಬಿಬಿಎಂಪಿ ಮುಂದಾಗಿದೆ.

IISC(ಭಾರತೀಯ ವಿಜ್ಞಾನ ಸಂಸ್ಥೆ) ವತಿಯಿಂದ ಗುಣಮಟ್ಟ ಪರಿಶೀಲನೆಗೆ ಬಿಬಿಎಂಪಿ ಮುಂದಾಗಿದೆ. ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ಕೊಟ್ಟಾಗಿನಿಂದ ಪ್ಲೈ ಓವರ್ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ರಸ್ತೆ ಉಬ್ಬು ತಗ್ಗು, ಮೇಲ್ಸೇತುವೆ ಅಲುಗಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಬಿಬಿಎಂಪಿ ತಾಂತ್ರಿಕ ಸಮಿತಿಯೂ ಕಾಮಗಾರಿ ಪರಿಶೀಲನೆ ನಡೆಸಿ ತಮ್ಮ ಬೆನ್ನು ತಾವೇ ತಟ್ಟಿಕೊಂಡಿತ್ತು. ಆದ್ರೆ ಇತ್ತೀಚೆಗೆ ಫ್ಲೈ ಓವರ್ ಉತ್ತಮವಾಗಿದೆ ಎಂಬ ವರದಿಯೂ ಬಂದಿತ್ತು. ಹೀಗಿದ್ರೂ ವಾಹನ ಸವಾರರಿಂದ ಫ್ಲೈ ಓವರ್ ಸರಿ ಇಲ್ಲ ಅಂತ ವಿರೋಧ ವ್ಯಕ್ತವಾಗ್ತಿದಂತೆ ಮತ್ತಷ್ಟು ಮುಜುಗರದಿಂದ ತಪ್ಪಿಸಿಕೊಳ್ಳೋಕೆ ಪಾಲಿಕೆ ಸರ್ಕಸ್ ಮಾಡ್ತಿದೆ.ಹೀಗಾಗಿ ಈಗಾಗಲೇ ಗುಣಮಟ್ಟ ಪರಿಶೀಲನೆ ನಡೆಸುವಂತೆ IISC ಗೆ ಬಿಬಿಎಂಪಿ ಪತ್ರ ಬರೆದಿದೆ.

Edited By : Manjunath H D
PublicNext

PublicNext

02/09/2022 09:05 pm

Cinque Terre

41.51 K

Cinque Terre

0

ಸಂಬಂಧಿತ ಸುದ್ದಿ