ಬೆಂಗಳೂರು: ಬಸವನಗುಡಿ ವಿಧಾನಸಭಾ ಕ್ಷೇತ್ರದ ಜಿಕ್ಕೆ ಪಾರ್ಕ್ ಎದುರು ನಿಲ್ಲಿಸಿದ ಬಸ್ಸು ಕುಸಿದಿದೆ. ವಾರದಿಂದ ಸುರಿಯುತ್ತಿರುವ ಮಳೆಗೆ ರಸ್ತೆ ಬದಿ ಇದ್ದ ಚೇಂಬರ್ ಪೂರ್ತೀಯು ಕುಸಿದಿದ್ದು, ಚೇಂಬರ್ ಮುಂದೆ ಜಾಗವೂ ಕುಸಿದಿದೆ, ಈ ಹಿನ್ನಲೆ ಬಸ್ಸುಕೂಡ ಒಂದು ಕಡೆ ವಾಲಿದೆ. ಮಧ್ಯಾಹ್ನವೇಳೆ ಅವಘಡ ಸಂಭವಿಸಿದ್ದು, ಅದೃಷ್ಟವಶಾಂತ್ ಯಾವ ಪ್ರಣಾಪಾಯ ಸಂಭವಿಸಿಲ್ಲ. ಕುಸಿಯುವ ಜಾಗದಲ್ಲಿ ಯಾರೂ ಓಡಾಡಿಲ್ಲ. ಬಸ್ಸಿನಲ್ಲಿ ಡ್ರೈವರ್ ಸಹ ಇಲ್ಲದ ಕಾರಣ ಯಾರಿಗೂ ಏನು ಆಗಿಲ್ಲ. ಇನ್ನೂ ಕುಸಿದಿರುವ ಚೇಂಬರ್ ಪಕ್ಕದಿಲ್ಲಿರುವ ವಿದ್ಯುತ್ ಕಬ್ಬವೂ ಕೂಡ ಬಿರುಕು ಬಿಟ್ಟಿದ್ದು, ಯಾವಗ ಕುಸಿಯುತ್ತೊ ಗೊತ್ತಿಲ್ಲ. ಕೂಡಲೆ ಯಾವುದೇ ಅಪಾಯ ಸಂಭವಿಸುವ ಮುಂಚಿತವಾಗಿ ಕಂಬವನ್ನ ಸರಿಪಡಿಸ ಬೇಕಿದೆ.
ಇನ್ನೂ ಈ ತರಹದ ಘಟನೆ ನಗರದಲ್ಲಿ ಹಲವಾರು ಕಡೆ ನಡೆಯುತ್ತಿದ್ದು, ಸಾರ್ವಜನಿಕರು ಗಾಯಗೊಳ್ಳುತ್ತಿದ್ದಾರೆ. ಯಾರು ಸಹ ಚೇಂಬರ್ ಆಸು ಪಾಸು, ಮರದ ಕೆಳಗಡೆ, ತಗ್ಗು ಪ್ರದೇಶಗಳ ಹತ್ತಿರ ನಿಲ್ಲಬೇಡಿ. ಕುಸಿಯುವ ಅಥವಾ ಮರದ ಕೊಂಬೆಗಳು ಬೀಳುವ ಚಾನ್ಸೆಸ್ ಬಹಳಷ್ಟಿದೆ.
Kshetra Samachara
01/09/2022 10:56 pm