ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾರಿಗೆ ನಿಗಮಗಳಿಗೆ ವರವಾಗೋ ಬದಲಿಗೆ ಶಾಪವಾಗುತ್ತಾ ಶ್ರೀನಿವಾಸ ಮೂರ್ತಿ ಕಮಿಟಿ ವರದಿ.?

ಬೆಂಗಳೂರು: ಶ್ರೀನಿವಾಸ ಮೂರ್ತಿ ಸಮಿತಿ ಸಾರಿಗೆ ನಿಗಮಗಳಿಗೆ ವರವಾಗುವ ಬದಲಿಗೆ ಶಾಪವಾಗುವ ಸಾಧ್ಯತೆಗಳಿದೆ. ಈ ಬಗ್ಗೆ ಸಾರಿಗೆ ನೌಕರರೇ ಆತಂಕ ವ್ಯಕ್ತಪಡಿಸಿದ್ದು, ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಹೌದು. ಶ್ರೀನಿವಾಸ ಮೂರ್ತಿ ವರದಿಯಲ್ಲಿ ನಾಲ್ಕು ಸಾರಿಗೆ ನಿಗಮಗಳನ್ನು ಮುಚ್ಚಲು ಸಲಹೆ ನೀಡಲಾಗಿದೆ. ಇದರಿಂದ ಸಮಿತಿಯ ವರದಿ ಖಾಸಗೀಕರಣ ಪರೋಕ್ಷ ದಾರಿಯನ್ನು ತೋರಿಸಿಕೊಟ್ಟಂತೆ ಇದೆ.

ಇನ್ನೂ ಬಸ್‌ಗೆ ಬಾಡಿ ಕಟ್ಟೋದ್ರಿಂದ ಹಿಡಿದು ಪ್ರತಿಯೊಂದು ರಿಪೇರಿ ಕೆಲಸವು ವರ್ಕ್ ಶಾಪ್‌ನವರೇ ಮಾಡಬೇಕಾಗುತ್ತದೆ. ಆದರೆ ಇವರಿಗೆ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದ್ದು, ಚಾಲಕ, ನಿರ್ವಾಹಕರಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಹಲವು ನೌಕರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವರದಿ- ಗಣೇಶ್ ಹೆಗಡೆ

Edited By : Vijay Kumar
PublicNext

PublicNext

06/08/2022 07:46 pm

Cinque Terre

18.46 K

Cinque Terre

1

ಸಂಬಂಧಿತ ಸುದ್ದಿ