ವಿಶೇಷ ವರದಿ- ಗಣೇಶ್ ಹೆಗಡೆ
ಬೆಂಗಳೂರು: ಸಾಲದ ಸುಳಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಲುಕಿಕೊಂಡು ಕೋಟಿ - ಕೋಟಿ ಬಡ್ಡಿ ಕಟ್ಟುತ್ತಿತ್ತು. ಇದೀಗ ಪಾಲಿಕೆ ಸಾಲಮುಕ್ತವಾಗಿದೆ.
ಪ್ರತಿಷ್ಠಿತ ಮೆಯೊ ಕೋರ್ಟ್, ಕೆ.ಆರ್.ಮಾರುಕಟ್ಟೆ, ಎಂ.ಜಿ.ರಸ್ತೆಯ ಪಿಯುಬಿ ಕಟ್ಟಡ, ಮಲ್ಲೇಶ್ವರ ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ, ಜಾನ್ಸನ್ ಮಾರುಕಟ್ಟೆ, ಕೆಂಪೇಗೌಡ ಸಂಗ್ರಹಾಲಯ, ವೆಸ್ಟರ್ನ್ ರೇಂಜರ್ಸ್ ಆಫೀಸ್ ಕಟ್ಟಡ, ಕಲಾಸಿಪಾಳ್ಯ ಮಾರುಕಟ್ಟೆ, ರಾಜಾಜಿನಗರ ಮಾರುಕಟ್ಟೆ ಸಂಕೀರ್ಣ, ಟ್ಯಾನರಿ ರಸ್ತೆಯ ಕಸಾಯಿಖಾನೆ ಸೇರಿದಂತೆ ಒಟ್ಟು 12 ಅಮೂಲ್ಯ ಆಸ್ತಿಗಳನ್ನು ಹುಡ್ಕೊ ಸಂಸ್ಥೆಗೆ ಅಡವಿಟ್ಟು 1,545.85 ಕೋಟಿ ರೂ. ಸಾಲವನ್ನು 2014 ರಲ್ಲಿ ಪಾಲಿಕೆ ಪಡೆದಿತ್ತು.
ತದ ನಂತರ ಕೆನರಾ ಬ್ಯಾಂಕ ಹಾಗೂ ಎಸ್ ಬಿ ಐ ಬ್ಯಾಂಕ್ ನಲ್ಲಿ ಹುಡ್ಕೋ ಸಾಲ ತೀರಿಸಲು ವಿವಿದ ಹಂತಗಳಲ್ಲಿ ಪಡೆದಿತ್ತು. ತದ ನಂತರ ನಿಧಾನವಾಗಿ ಸಾಲ ವನ್ನು ಪಾವತಿಸುತ್ತ ಬಂದ ಪಾಲಿಕೆ ಪ್ರತಿ ತಿಂಗಳು ಕಂತು 14 ಕೋಟಿ ರೂ. ಪಾವತಿ ಮಾಡುತ್ತಾ ಬಂದಿದೆ.
ಇದರಿಂದಾಗಿ ಕಡೆಯದಾಗಿ ಎಸ್ ಬಿಐ ನಲ್ಲಿದ್ದ 871 ಕೋಟಿ ಸಾಲವ ನ್ನು ಪಾವತಿಸಿದೆ. ಈ ಸಾಲಕ್ಕಾಗಿ ದಾಸಪ್ಪ ಆಸ್ಪತ್ರೆ, ಕಲಾಸಿಪಾಳ್ಯ ಮಾರ್ಕೇಟ್, ಕೆ.ಆರ್.ಮಾರ್ಕೇಟ್ ಸಾಲಕ್ಕಾಗಿ ಬಿಬಿಎಂಪಿ ಅಡಮಾನ ಇಟ್ಟಿತ್ತು. ಇದೀಗ ಸಾಲವನ್ನು ಪಾವತಿ ಮಾಡಿ ದ ಹಿನ್ನೆಲೆಯಲ್ಲಿ ಅಡಮಾನವಿಟ್ಟಿದ್ದ ತನ್ನ ಆಸ್ತಿಯನ್ನು ಬ್ಯಾಂಕ್ ನಿಂದ ಬಿಬಿಎಂಪಿ ವಾಪಸ್ ಪಡೆದಿದೆ. ಒಟ್ನಲ್ಲಿ ಇದೀಗ ಪಾಲಿಕೆ ಹೆಸ್ರಲ್ಲಿ ಯಾವುದೇ ಸಾಲ ಇಲ್ಲ.
Kshetra Samachara
21/07/2022 07:26 pm