ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ವಾರ್ಡ್ ಗಿಂತ ಯಾವ ವಾರ್ಡ್ ನಲ್ಲೂ ಇಷ್ಟು ಸಮಸ್ಯೆಗಳಿಲ್ಲ! ನೀರಿನ ಸಮಸ್ಯೆ, ರಸ್ತೆ ಸಮಸ್ಯೆ ಹೀಗೆ ನಾನಾ ಮೂಲಭೂತ ಸೌಕರ್ಯಗಳಿಂದ ಬಳಲುತ್ತಿದ್ದಾರೆ ಇಲ್ಲಿನ ಜನರು. ಈ ವಾರ್ಡ್ ನಲ್ಲಿ ರಸ್ತೆ ಯಾವ ಮಟ್ಟಕ್ಕೆ ಇದೆ ಅಂದ್ರೆ ದಿನನಿತ್ಯ ವಾಹನ ಸವಾರರ ಮಾರಣಹೋಮವೇ ನಡೀತಿದೆ!
ಇದು ಯಶವಂತಪುರ ವಿಧಾನಸಭಾ ಕ್ಷೇತ್ರದ ಉಲ್ಲಾಳ್ ವಾರ್ಡ್. ಇಲ್ಲಿ ರಸ್ತೆ ಸಮಸ್ಯೆಯೊಂದಿಗೆ ಧೂಳಿನ ಸಮಸ್ಯೆಯೂ ಕಾಡುತ್ತಿದೆ. ಈ ರಸ್ತೆ ಮೂಲಕ ಒಂದೆರಡು ಕಿಮೀ ಮುಂದೆ ಹೋದ್ರೆ ಪ್ರಧಾನಿ ನರೇಂದ್ರ ಮೋದಿಯವರು ಬಂದು ಹೋದಂತಹ ರಸ್ತೆ ಬರುತ್ತೆ. ಅಲ್ಲಿ ಡಾಂಬರು ಹಾಕಿದ್ದಾರೆ. ಆದ್ರೆ, ಒಂದೇ ಒಂದು ಕಿಮೀ ಹಿಂದೆ ಜಲ್ಲಿಕಲ್ಲು ಹಾಕಿ ಬಿಟ್ಟಿದ್ದಾರೆ.
ಈ ರಸ್ತೆಯಲ್ಲಿ ಓಡಾಡುವ ವಾಹನಸವಾರರ ಗೋಳು ಕೇಳೋರಿಲ್ಲದ ಹಾಗಾಗಿದೆ. ಈ ಬಗ್ಗೆ ಸಾರ್ವಜನಿಕರನ್ನು ಕೇಳಿದ್ರೆ ಮೊದಲು ಗುಂಡಿಗಳಿಂದ ಕೂಡಿತ್ತು, ಈಗ ಜಲ್ಲಿ ಹಾಕಿದ್ದಾರೆ. ಯಾವಾಗ ಡಾಂಬರು ಹಾಕ್ತಾರೋ ನೋಡಬೇಕು ಅಂತಾರೆ.
ಈ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ನಮ್ಮ ಯಶವಂತಪುರ ವಿಧಾನಸಭಾ ಕ್ಷೇತ್ರದ ರಿಪೋರ್ಟರ್ ರಂಜಿತಾ ನಡೆಸಿರುವ ಸಣ್ಣದಾದ ವಾಕ್ ಥ್ರೂ ಇಲ್ಲಿದೆ.
PublicNext
30/06/2022 10:23 pm