ಬೆಂಗಳೂರು: ಬಿಬಿಎಂಪಿ ವಾರ್ಡ್ ಮರು ವಿಂಗಡನೆಯಲ್ಲಿ ಸಾಲು - ಸಾಲು ಎಡವಟ್ಟುಗಳು ಬೆಳಕಿಗೆ ಬಂದಿದ್ದು, ವಿಪಕ್ಷ ಕಾಂಗ್ರೆಸ್ ನಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ ಜಯನಗರ ವಾರ್ಡ್ ಅಶೋಕ ಪಿಲ್ಲರ್ ವಾರ್ಡ್ ಮರು ನಾಮಕರಣ ಮಾಡಿದ್ದಕ್ಕೆ ಆಸಮಾಧನ ವ್ಯಕ್ತವಾಗಿದೆ. ಏಷ್ಯಾ ಖಂಡದಲ್ಲೇ ಅತ್ಯಂತ ದೊಡ್ಡ ವಾರ್ಡ್ ಎಂಬ ಹೆಸರನ್ನು ಜಯನಗರ ವಾರ್ಡ್ ಪಡೆದಿದೆ. ಸ್ವಾತಂತ್ರ್ಯ ನಂತರ ಘೋಷಣೆಯಾದ ಮೊದಲ ವಾರ್ಡ್ ಇದಾಗಿದೆ. ಇದನ್ನೇ ಬಿಬಿಎಂಪಿ ಡಿಮಿಲಿಟೇಷನ್ ಕಮಿಟಿ ಬದಲಿಸಿರೋದು ಸರಿಯಲ್ಲ ಎಂದು ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಹೇಳಿದ್ದಾರೆ. ಜಯನಗರ ವಾರ್ಡ್ ಅನ್ನು ಉಳಿಸಿಕೊಳ್ಳೋದು ನಮ್ಮ ಕರ್ತವ್ಯ ಎಂದು ಅವರು ತಿಳಿಸಿದ್ದಾರೆ.
Kshetra Samachara
24/06/2022 05:34 pm