ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೆಟ್ರೋ 3ನೇ ಹಂತ ನೀಲನಕ್ಷೆ ಪೂರ್ಣ; ಕಾಮಗಾರಿಗೆ ಸಿದ್ಧತೆ

ಬೆಂಗಳೂರು: ರಾಜಧಾನಿ ಬೆಂಗಳೂರು ಪರ್ಯಾಯ ಸಾರಿಗೆ ಅಂತಾ ಕರೆಸಿಕೊಳ್ಳುವ 'ನಮ್ಮ ಮೆಟ್ರೋ' ಇದೀಗ 3ನೇ ಹಂತದ ಕಾರ್ಯಕ್ಕೆ ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ...

ರಾಜಧಾನಿ ಬೆಂಗಳೂರು ನಮ್ಮ ಮೆಟ್ರೋ 3ನೇ ಹಂತದ ಯೋಜನೆ ನೀಲನಕ್ಷೆ ಸಿದ್ಧವಾಗಿದೆ. 45 ಕಿ.ಮೀ. ವಿಸ್ತಿರ್ಣದ ಎರಡು ಕಾರಿಡಾರ್ ನಿರ್ಮಿಸ ಲಾಗುತ್ತಿದೆ. ಬಿಎಂಆರ್ ಸಿಎಲ್ ತನ್ನ 2ನೇ ಹಂತದ ಮೆಟ್ರೋ ಯೋಜನೆಯನ್ನು 2024ರೊಳಗೆ ಪೂರ್ಣಗೊಳಿಸುವ ಇರಾದೆ ಹೊಂದಿದೆ. ಆದರೆ, 2ನೇ ಹಂತದ ಮೆಟ್ರೋ ಯೋಜನೆ ಪ್ರಾರಂಭಕ್ಕೂ ಮುನ್ನ 3ನೇ ಹಂತದ‌ ಯೋಜನೆ ನೀಲನಕ್ಷೆ ಸಿದ್ಧಗೊಂಡಿತ್ತು.

ನಿನ್ನೆ ಕರಡು ನಕ್ಷೆಯನ್ನು ಪ್ರಕಟಿಸಿದೆ. ಹೊರವಲಯದಲ್ಲಿ ಮೆಟ್ರೋ ಆಗಮನದ ನಿರೀಕ್ಷೆ ಇದ್ದ ಜನರಿಗೆ ಸಂತಸ ಉಂಟುಮಾಡಿದೆ. ಬಹುತೇಕ 204+25 ರ ನಡುವೆ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ಪೂರ್ಣವಾಗಲಿದ್ದು, ಇದೇ ಸಂದರ್ಭದಲ್ಲಿ 3ನೇ ಹಂತದ ಕಾಮಗಾರಿ ಆರಂಭವಾಗಲಿದೆ.

ಇದೇ ವೇಳೆ ಜೆ.ಪಿ.ನಗರದಿಂದ ಹೆಬ್ಬಾಳದವರಗೆ 32 ಕಿ.ಮೀ. ಹಾಗೂ ‌ಹೊಸಹಳ್ಳಿ ಟೋಲ್ ನಿಂದ ಕಡಬಗೆರೆ ವರೆಗಿನ 13 ಕಿ.ಮೀ. ಎರಡು ಕಾರಿಡಾರ್ ಯೋಜನೆ 3ನೇ ಹಂತದ ಮೆಟ್ರೋ ಯೋಜನೆಯಲ್ಲಿ ಬರಲಿದೆ. ಈ ಯೋಜನೆ ಉಪ ನಗರ ರೈಲು, ಬಸ್ ಡಿಪೋಗಳಿಗೆ ಸೇರಿ ಪ್ರಮುಖ 9 ಸಾರಿಗೆ ತಾಣಗಳಿಗೆ ಸಂಪರ್ಕ ಕಲ್ಪಿಸಲಿದೆ. 11.250 ಕೋಟಿ ರೂ. ವೆಚ್ಚದಲ್ಲಿ ನೀಲನಕ್ಷೆ ಸಿದ್ಧವಾಗಿದ್ದು, ಕೆ.ಆರ್.ಪುರಂ, ಹೆಬ್ಬಾಳ, ಕಾಮಾಕ್ಷಿ ಮೆಟ್ರೋ ನಿಲ್ದಾಣ, ಏರ್ ಪೋರ್ಟ್ ಮೂಲಕ 2ನೇ ಹಂತದ ಯೋಜನೆಗೆ ಸಂಪರ್ಕ ಕಲ್ಪಿಸಲಿದೆ.

ಗಣೇಶ್ ಹೆಗಡೆ 'ಪಬ್ಲಿಕ್ ನೆಕ್ಸ್ಟ್' ಬೆಂಗಳೂರು

Edited By : Somashekar
Kshetra Samachara

Kshetra Samachara

17/06/2022 04:41 pm

Cinque Terre

2.76 K

Cinque Terre

0

ಸಂಬಂಧಿತ ಸುದ್ದಿ